ಅಜೆಕಾರು ಕಲಾಭಿಮಾನಿ ಬಳಗಕ್ಕೆ ಆಯ್ಕೆ
ಮಂಗಳೂರು, ಮಾ.25: ಮುಂಬೈಯ ಅಜೆಕಾರು ಕಲಾಭಿಮಾನಿ ಬಳಗದ ತವರೂರ ನೂತನ ಪ್ರಾದೇಶಿಕ ಸಮಿತಿಯೊಂದು ಕಾರ್ಕಳ ತಾಲೂಕಿನ ಅಜೆಕಾರಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಸ್ಥಳೀಯ ಉದ್ಯಮಿ ಹಾಗೂ ಕಲಾ ಪೋಷಕ ವಿಜಯ ಶೆಟ್ಟಿ ಅಜೆಕಾರು ಬಳಗದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
ಅಜೆಕಾರು ಬಾಲಕೃಷ್ಣ ಶೆಟ್ಟಿ (ಸ್ಥಾಪಕಾಧ್ಯಕ್ಷ), ಶಿವರಾಮ ಜಿ.ಶೆಟ್ಟಿ ದೇವಸ್ಯ ಅಜೆಕಾರು (ಗೌರವಾಧ್ಯಕ್ಷ), ಭಾಸ್ಕರ ಶೆಟ್ಟಿ ಕುಂಟಿನಿ, ಭೋಜ ಮಡಿವಾಳ ಪರಂಬರಬೆಟ್ಟು, ಗುರುಪ್ರಸಾದ ರಾವ್ (ಉಪಾಧ್ಯಕ್ಷರು), ಪ್ರಶಾಂತ ಶೆಟ್ಟಿ ಕುಂಟಿನಿ (ಸಂಚಾಲಕ), ಶಂಕರ ಆಚಾರ್ಯ (ಪ್ರಧಾನ ಕಾರ್ಯದರ್ಶಿ), ರಾಘವೇಂದ್ರ ಪಾಟ್ಕರ್ (ಜೊತೆ ಕಾರ್ಯದರ್ಶಿ), ಪ್ರಕಾಶ ಶೆಟ್ಟಿ ಮಜಲು ಮನೆ (ಕೋಶಾಧಿಕಾರಿ) ಆಯ್ಕೆಯಾಗಿದ್ದಾರೆ.
ಕಾರ್ಯಕಾರಿಣಿ ಸದಸ್ಯರಾಗಿ ಹರೀಶ್ ನಾಯಕ್, ರತ್ನಾಕರ ಅಮೀನ್, ಅಮೃತೇಶ್ ಶೆಟ್ಟಿ ವಾಂಚಾರು, ಸಂತೋಷ್ ಶೆಟ್ಟಿ ಕೇಪುಲಲ್ಕೆ, ಅಶೋಕ ಗಾಣದಬೆಟ್ಟು, ಕರುಣಾಕರ ಶೆಟ್ಟಿ ಬಸ್ತಿಬೆಟ್ಟು,ಪುಷ್ಪರಾಜ್ ಶೆಟ್ಟಿ, ಯಜ್ಞೇಶ್ ಶೆಟ್ಟಿ ಪುಟ್ಟಾಯಿಬೆಟ್ಟು, ಅನಿಲ್ ಕುಮಾರ್ ಪಿ. ಅರ್ಪಿತ ಅಜೆಕಾರ್, ಅಕ್ಷಯ್, ಸಂತೋಷ್ ಕುಲಾಲ್ ಮಂಗಳ ನಗರ, ಅರುಣ್ ಶೆಟ್ಟಿಗಾರ್ ಅಪ್ಸರ, ಉಮೇಶ್ ಶೆಟ್ಟಿ ಮಜಲು ಮನೆ ಆಯ್ಕೆಯಾಗಿದ್ದಾರೆ.
ಸಮಿತಿಯ ಗೌರವ ಸಲಹೆಗಾರರಾಗಿ ಮೋಹನ್ ಶೆಟ್ಟಿ ಎಣ್ಣೆಹೊಳೆ ಪುಣೆ, ಡಾ. ಸಂತೋಷ್ ಕುಮಾರ್ ಶೆಟ್ಟಿ, ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ಸುಧಾಕರ ನಾಯಕ್ ಕುರ್ಪಾಡಿ, ಡಾ.ಜನಾರ್ದನ ನಾಯಕ್, ಅರುಣ್ ಭಟ್ ಎಣ್ಣೆಹೊಳೆ, ರಾಘವೇಂದ್ರ ಭಟ್ ಗುಡ್ಡೆಯಂಗಡಿ, ಜಯರಾಮ ಶೆಟ್ಟಿ ಎಣ್ಣೆಹೊಳೆ, ದಿನೇಶ್ ಶೆಟ್ಟಿ ಕಾವಳಕಟ್ಟೆ, ನಂದ ಕುಮಾರ್ ಹೆಗ್ಡೆ ಅಜೆಕಾರ್ ಆಯ್ಕೆಯಾಗಿದ್ದಾರೆ.