ಉಡುಪಿ: ದಿನದಲ್ಲಿ 1146 ಮಂದಿಯಿಂದ ಲಸಿಕೆ ಸ್ವೀಕಾರ
ಉಡುಪಿ, ಮಾ.25: ಕೊರೋನಕ್ಕೆ ಲಭ್ಯವಿರುವ ಲಸಿಕೆಯನ್ನು ಗುರುವಾರ ಒಟ್ಟು 1146 ಮಂದಿ ಸ್ವೀಕರಿಸಿದ್ದಾರೆ. ಇವರಲ್ಲಿ ಒಟ್ಟು 1010 ಮಂದಿ ಮೊದಲ ಡೋಸ್‌ನ್ನು, 136 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ದಿನದಲ್ಲಿ 60 ಮೇಲ್ಪಟ್ಟ 713 ಮಂದಿ ಹಿರಿಯ ನಾಗರಿಕರೊಂದಿಗೆ, 45ರಿಂದ 59 ವರ್ಷದೊಳಗಿನ ಬೇರೆ ಬೇರೆ ರೋಗದಿಂದ ನರಳುವ 160 ಮಂದಿ ಈ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 42,784 ಮಂದಿ ಹಿರಿಯ ನಾಗರಿಕರು ಹಾಗೂ 7281 ಮಂದಿ 45-59 ವಯೋಮಾನದವರು ಲಸಿಕೆಯ ಮೊದಲ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದರು.
ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಒಟ್ಟು 23,889 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಇಂದು 119 ಮಂದಿ ಮೊದಲ ಡೋಸ್‌ನ್ನು (ಒಟ್ಟು 21,164) ಪಡೆದರೆ, 107 ಮಂದಿ ಎರಡನೇ ಡೋಸ್‌ನ್ನು (ಒಟ್ಟು 15,470)ಸ್ವೀಕರಿಸಿದ್ದಾರೆ.
ಎರಡನೇ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಜಿಲ್ಲೆಯ ಒಟ್ಟು 4283 ಮಂದಿ ಮುಂಚೂಣಿ ಕಾರ್ಯಕರ್ತರ ಪೈಕಿ ಇಂದು 18 ಮಂದಿ ಮೊದಲ ಡೋಸ್ ಪಡೆದಿದ್ದು, ಒಟ್ಟಾರೆಯಾಗಿ ಇವರ ಸಂಖ್ಯೆ 3777 ಆಗಿದೆ. ಅಲ್ಲದೇ 29 ಮಂದಿ ಎರಡನೇ ಡೋಸ್ ಪಡೆದಿದ್ದು ಇವರ ಒಟ್ಟು ಸಂಖ್ಯೆ 1829 ಆಗಿದೆ. ಜಿಲ್ಲೆಯಲ್ಲಿ ಇದುವರೆಗೆ 75,006 ಮಂದಿ ಲಸಿಕೆಯ ಮೊದಲ ಡೋಸ್‌ನ್ನೂ, 17,299 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ ಎಂದು ಡಾ.ಸೂಡ ವಿವರಿಸಿದರು.
ಮಾಸ್ಕ್ ಧರಿಸದವರಿಂದ 53 ಸಾವಿರ ರೂ. ದಂಡ ವಸೂಲಿ
ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಎರಡನೆ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ ಮಾ.24ರಂದು ಒಂದೇ ದಿನ ಮಾಸ್ಕ್ ಧರಿಸದೆ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ ಜಿಲ್ಲೆಯ ಒಟ್ಟು 535 ಮಂದಿ ಯಿಂದ ಒಟ್ಟು 53,500 ರೂ. ದಂಡ ವಸೂಲಿ ಮಾಡಿದೆ.
ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 249 ಮಂದಿಯಿಂದ 24,900 ರೂ., ಜಿಲ್ಲೆಯ ಪಂಚಾಯತ್ ವ್ಯಾಪ್ತಿಯಲ್ಲಿ 57 ಮಂದಿಯಿಂದ 5,700ರೂ., ಅಬಕಾರಿ ಇಲಾಖೆಯಿಂದ 26 ಮಂದಿಯಿಂದ 2,600 ರೂ., ಕಂದಾಯ ಇಲಾಖೆ 67 ಮಂದಿಯಿಂದ 6,700ರೂ., ಪೊಲೀಸ್ ಇಲಾಖೆ 136 ಮಂದಿಯಿಂದ 13,600ರೂ. ದಂಡ ವಸೂಲಿ ಮಾಡಿವೆ.
ಈ ಮೂಲಕ ದಿನದಲ್ಲಿ ಒಟ್ಟು 535 ಮಂದಿಯಿಂದ 53,500ರೂ. ಸೇರಿದಂತೆ ಈವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 24,164 ಮಂದಿಯಿಂದ ದಂಡ ರೂಪದಲ್ಲಿ 25,75,000ರೂ. ಗಳನ್ನು ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ