ಮಲ್ಲಾರಿನಲ್ಲಿ ಉಚಿತ ಆರೋಗ್ಯ ತಪಾಸಣೆ

Update: 2021-03-25 17:04 GMT

ಕಾಪು : ಮಾನವನಿಗೆ ಆರೋಗ್ಯ ಅತೀ ಮುಖ್ಯ. ಆರೋಗ್ಯದ ಬಗ್ಗೆ ಜನರಲ್ಲಿ ನಿರ್ಲಕ್ಷ ಮನೋಭಾವ ಇರಬಾರದು. ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಉಡುಪಿಯ ಮಿಷನ್ ಹಾಸ್ಪಿಟಲ್‍ನ ನಿರ್ದೇಶಕ ಡಾ. ಸುಶೀಲ್ ಜತ್ತನ್ನ ಹೇಳಿದರು. 

ಅವರು ಗುರುವಾರ ಮಲ್ಲಾರ್ ಪಕೀರ್ಣ ಕಟ್ಟೆ  ಹಿಂದೂಸ್ತಾನಿ ಶಾಲೆಯ ಬಳಿ ಆಯುಷ್ ಕ್ಲಿನಿಕ್‍ನಲ್ಲಿ ಜಮೀಯ್ಯತುಲ್ ಫಲಾಹ್ ಕಾಪು, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾಪು, ಲಾಂಬೋರ್ಡ್ ಸ್ಮಾರಕ ಮಿಷನ್ ಆಸ್ಪತ್ರೆ ಉಡುಪಿ ಇವರ ಸಹಭಾಗಿತ್ವದಲ್ಲಿ ಉಚಿತ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮಿಷನ್ ಆಸ್ಪತ್ರೆ ಆರಂಭವಾಗಿ ಮುಂದಿನ ವರ್ಷ ದತಮಾನೋತ್ಸವ ಆಚರಿಸಲಿದ್ದು, ವಿವಿಧ ಕಡೆಗಳಲ್ಲಿ ಜನರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯ ಶಿಬಿರವನ್ನು ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಲಾಗುವುದು ಎಂದು ಅವರು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಜಮೀಯತುಲ್ ಫಲಾಹ್ ದ.ಕ., ಉಡುಪಿ ಜಿಲ್ಲೆ ಹಾಗೂ ಕಾಪು ತಾಲೂಕು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಶಭಿ ಅಹ್ಮದ್ ಕಾಝಿ ಮಾತನಾಡಿ, ಈ ಭಾಗದ ಜನರ ಆರೋಗ್ಯದ ದೃಷ್ಟಿಯಲ್ಲಿ ಆಯುಷ್ ಕ್ಲಿನಿಕ್‍ನ್ನು ತೆರೆದುಕೊಂಡಿದ್ದು, ಈಗ ವಾರಕ್ಕೆ ಎರಡು ದಿನ ವೈದ್ಯರುಗಳು ಇದ್ದಾರೆ. ಇದನ್ನು ವಾರದ ಎಲ್ಲಾ ದಿನಗಳೂ ವೈದ್ಯರ ಲಭ್ಯ ಇರುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗಿದೆ ಎಂದರು.

ಶಿಬಿರದಲ್ಲಿ ಭಾಗಿಯಾದವರಿಗೆ ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ವತಿಯಿಂದ ಉಚಿತವಾಗಿ ವಿತರಿಸಲಾಗುವುದು ಎಂದು ಕಾಪು ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಘೋಷಿಸಿದರು.

ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್‍ನ ಭಾಸ್ಕರ್ ಆಚಾರ್ಯ, ವೈದ್ಯಕೀಯ ಪ್ರತಿನಿಧಿ ಸಂಘದ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲ್, ನೇತ್ರ ತಜ್ಞೆ ಡಾ. ರೂಪ ಶ್ರೀ ಮತ್ತು ಡಾ. ಗಣೇಶ್ ಕಾಮತ್ ಸಾಂದರ್ಭಿಕವಾಗಿ ಮಾತಾಡಿದರು.

ಜಂಇಯ್ಯತುಲ್ ಫಲಾಹ್ ಕಾಪು ತಾಲೂಕು ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಸಾಹೇಬ್ ಸ್ವಾಗತಿಸಿದರು. ಅನ್ವರ್ ಆಲಿ ಕಾಪು ಕಾರ್ಯಕ್ರಮ ನಿರ್ವಹಿಸಿದರು. ಮುಸ್ಲಿಮ್ ಒಕ್ಕೂಟದದ ಕಾಪು ತಾಲ್ಲೂಕು ಕಾರ್ಯದರ್ಶಿ ರಿಯಾಝ್ ನಝೀರ್ ಸಾಹೇಬ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News