ಪ್ರೊ.ಅಬೂಬಕರ್ ತುಂಬೆ ಶ್ರದ್ಧಾಂಜಲಿ
Update: 2021-03-25 22:41 IST
ಮಂಗಳೂರು, ಮಾ.25: ಶಿಕ್ಷಣ ಪ್ರೇಮಿ ಅಬೂಬಕರ್ ತುಂಬೆ ಅವರ ಶ್ರದ್ಧಾಂಜಲಿ ಕಾರ್ಯಕ್ರಮವು ನಗರದ ಕಂದಕ್‌ನ ಬದ್ರಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು.
ಈ ಸಂದರ್ಭ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ಸರಳಾ ವರ್ಗಿಸ್ ಮಾತನಾಡಿ, ಅಬೂಬಕರ್ ತುಂಬೆ ಬದ್ರಿಯ ಶಿಕ್ಷಣ ಸಂಸ್ಥೆಯಲ್ಲಿ ಸಲ್ಲಿಸಿದ ಸೇವೆ ಅನನ್ಯ. ಇದುವರೆಗೆ ತಮಗೆ ಸಾಧ್ಯವಾದಷ್ಟು ನೆರವು ನೀಡುತ್ತಿದ್ದರು. ಆರ್ಥಿಕವಾಗಿ ಕಷ್ಟದಲ್ಲಿರುವ ವಿದ್ಯಾರ್ಥಿಯ ಶುಲ್ಕವನ್ನು ಅವರು ಪ್ರಸಕ್ತ ಸಾಲಿನಲ್ಲೂ ಪಾವತಿಸಿದ್ದನ್ನು ಕೃತಜ್ಞಾಪೂರ್ವವಾಗಿ ನೆನಪಿಸಿದರು.
ಬದ್ರಿಯ ಪ್ರೌಢಶಾಲೆಯ ಮುಖ್ಯಸ್ಥ ಮುಹಮ್ಮದ್ ಇಕ್ಬಾಲ್, ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಚಾರ್ಯ ಯೂಸುಫ್ ಮಾತನಾಡಿದರು.