ಮಾ. 26: ಸಾರ್ವಜನಿಕ ಆರೋಗ್ಯ ಮಾಹಿತಿ ಶಿಬಿರ
Update: 2021-03-25 22:48 IST
ಮಂಗಳೂರು : ಅಖಿಲ ಭಾರತ ಬ್ಯಾರಿ ಪರಿಷತ್ ಹಾಗೂ ವೆಲ್ ನೆಸ್ಸ್ ಹೆಲ್ಫ್ ಲೈನ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮಾ.26ರಂದು ಸಂಜೆ ಗಂಟೆ 4:30 ರಿಂದ 6:30ರವರೆಗೆ ಸಾರ್ವಜನಿಕ ಆರೋಗ್ಯ ಮಾಹಿತಿ ಶಿಬಿರವನ್ನು ಬಲ್ಮಠ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ತಾಜುದ್ದೀನ್ ಕೆ, ಡಾ. ರತ್ನಾಕರ್ ಮತ್ತು ವೆಲ್ ನೆಸ್ ಹೆಲ್ಫ್ ಲೈನ್ ನ ಟ್ರಸ್ಟಿ ಅಹ್ಮದ್ ಖಾಸಿಮ್ ಎಚ್.ಕೆ ಭಾಗವಹಿಸಲಿದ್ದಾರೆ ಎಂದು ಆಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷರಾದ ಹಾಜಿ ಕೆ.ಎಸ್. ಅಬೂಬಕ್ಕರ್ ಪಲ್ಲಮಜಲು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.