ತಲಪಾಡಿ : ಲಘು ವಾಹನಗಳಿಗೆ ಟೋಲ್ ಮುಕ್ತ ಸಂಚಾರಕ್ಕೆ ಮನವಿ
ಉಳ್ಳಾಲ : ತಲಪಾಡಿ ಆಸುಪಾಸಿನಲ್ಲಿ ಕಾರ್ಯಾಚರಿಸುತ್ತಿರುವ ಲಘು ವಾಣಿಜ್ಯ ವಾಹನ ಗಳು ಟೋಲ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಗುರುವಾರ ಟೋಲ್ ಗೇಟ್ ಮುಂಭಾಗದಲ್ಲಿ ಧರಣಿ ನಡೆಸಿ ನವಯುಗ ಕಂಪೆನಿ ಅಧಿಕಾರಿ ಗಳಿಗೆ ಮನವಿ ನೀಡಲಾಯಿತು.
ಎರಡು ವಾರಗಳ ಹಿಂದೆ ಮಂಗಳೂರು ತಲಪಾಡಿ ಗೆ ಸಂಚರಿಸುವ ಸಿಟಿ ಬಸ್ ಹಾಗೂ ತಲಪಾಡಿ ಟೋಲ್ ಗೇಟ್ ಐದು ಕಿಮೀ ವ್ಯಾಪ್ತಿಯ ಜನರಿಗೆ ಟೋಲ್ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆದಿತ್ತು.
ಈ ಬಗ್ಗೆ ಜಿಲ್ಲಾಡಳಿತ ದ ನೇತೃತ್ವದಲ್ಲಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಲಾಗಿತ್ತು. ತಲಪಾಡಿ ವ್ಯಾಪ್ತಿಯ ಲಘು ಟ್ಯಾಕ್ಸಿ ಚಾಲಕರು ಟೋಲ್ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಬಗೆ ಗುರುವಾರ ನವಯುಗ ಕಂಪೆನಿ ಅಧಿಕಾರಿ ಗಳಿಗೆ ಮನವಿ ಅರ್ಪಿಸಿದ ಲಘು ಟ್ಯಾಕ್ಸಿ ಚಾಲಕ ರು ಟೋಲ್ ದರದಿಂದ ಆಗುತ್ತಿರುವ ತೊಂದರೆ ಗಳ ಬಗ್ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಅಪರೂಪಕ್ಕೆ ಒಂದೆರಡು ಬಾಡಿಗೆ ಸಿಗುತ್ತದೆ. ನಮ್ಮ ಕುಟುಂಬ ಜೀವನಕ್ಕೆ ಇದುವೇ ಆಧಾರ. ಆದರೆ ಒಂದೆಡೆ 200 ರೂ.ಬಾಡಿಗೆ ಸಿಕ್ಕಿದರೆ 160 ರೂ.ಟೋಲ್ ಪಾವತಿಸಬೇಕು.ಉಳಿದ 40 ರೂ.ನಲ್ಲಿ ಜೀವನ ನಡೆಸಲು ಹೇಗೆ ಸಾಧ್ಯ ಎಂದು ಈ ಸಂದರ್ಭದಲ್ಲಿ ತಮ್ಮ ನೋವನ್ನು ತೋಡಿಕೊಂಡರು. ಸಮಸ್ಯೆ ಇತ್ಯರ್ಥ ಆಗದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾ.ಪಂ.ಸದಸ್ಯ ಸಿದ್ದೀಕ್ ತಲಪಾಡಿ, ಲಘು ವಾಹನ ಚಾಲಕರಾದ ಅಶ್ರಫ್, ಸಿದ್ದೀಕ್, ಗೋಪಾಲ, ಇಸ್ಮಾಯಿಲ್, ಆಸೀಫ್, ಹಸೈನಾರ್, ಸುನಿಲ್ ಮೊದಲಾದವರು ಇದ್ದರು.