ಮಾ.27: ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿ ವತಿಯಿಂದ ಬ್ಯಾರಿಕೇಡ್ ಅಳವಡಿಕೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Update: 2021-03-26 12:37 GMT

ಪಡುಬಿದ್ರಿ: ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿಯು ಮಾರ್ಚ್ 27ರಂದು ಗ್ರಾಮ ವ್ಯಾಪ್ತಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಶುಕ್ರವಾರ ಹೆಜಮಾಡಿ ಹಿರಿಯ ಪ್ರಾಥಮಿಕ ಶಾಲಾ ಸಂಕೀರ್ಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಕ್ರಿಯಾ ಸಮಿತಿಯ ಅಧ್ಯಕ್ಷ ಸುಧಾಕರ ಕರ್ಕೇರ ಮಾಹಿತಿ ನೀಡಿದ್ದಾರೆ.

ಮಾ.27 ಶನಿವಾರ ಬೆಳಿಗ್ಗೆ 9.30 ಗಂಟೆಗೆ ಹೆಜಮಾಡಿಯ ಕನ್ನಂಗಾರು ಬೈಪಾಸ್ ಬಳಿ ವಾಹನ ಅಪಘಾತ ತಡೆಗಟ್ಟುವ ಮುಂಜಾಗ್ರತಾ ಕ್ರಮವಾಗಿ ಬ್ಯಾರಿಕೇಡ್ ಅಳವಡಿಕೆ ಕಾರ್ಯಕ್ರಮ ನಡೆಯಲಿದೆ. 

ಹೆಜಮಾಡಿ ಅಲ್ ಅಝರ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಶೇಖಬ್ಬ ಕೋಟೆ ಉದ್ಘಾಟನೆ ನೆರವೇರಿಸಲಿದ್ದು, ಜಿಪಂ ಸದಸ್ಯ ಶಶಿಕಾಂತ್ ಪಡುಬಿದ್ರಿ, ಹೆಜಮಾಡಿ ಗ್ರಾಪಂ ಅಧ್ಯಕ್ಷ ಪ್ರಾಣೇಶ್ ಹೆಜಮಾಡಿ, ಪಡುಬಿದ್ರಿ ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ, ಪಡುಬಿದ್ರಿ ಠಾಣಾಧಿಕಾರಿ ದಿಲೀಪ್ ಜಿ.ಆರ್., ನವಯುಗ್ ವ್ಯವಸ್ಥಾಪಕ ಶಿವಪ್ರಸಾದ್ ರೈ ಮುಖ್ಯ ಅತಿಥಿಗಳಾಗಿರುವರು.

ಅದೇ ದಿನ ಸಂಜೆ 4.30 ಗಂಟೆಗೆ ಹೆಜಮಾಡಿ ಬಿಲ್ಲವರ ಸಂಘದ ರತ್ನಾ ಶಂಕರ ಸಭಾಂಗಣದಲ್ಲಿ ಕ್ರಿಯಾ ಸಮಿತಿಯ ಅಧ್ಯಕ್ಷ ಸುಧಾಕರ ಕರ್ಕೇರ ಅಧ್ಯಕ್ಷತೆಯಲ್ಲಿ ನಡೆಯುವ ಅಭಿನಂದನಾ ಸಮಾರಂಭದಲ್ಲಿ ಕಟೀಲು ದೇವಳದ ಪ್ರಧಾನ ಅರ್ಚಕ ಅನಂತ ಪದ್ಮನಾಭ ಅಸ್ರಣ್ಣ, ಮೂಲ್ಕಿ ಚರ್ಚ್ ಧರ್ಮಗುರು ಸಿಲ್ವೆಸ್ಟರ್ ಡಿಕೋಸ್ತಾ, ಕನ್ನಂಗಾರು ಜುಮ್ಮಾ ಮಸೀದಿಯ ಧರ್ಮಗುರು ಅಶ್ರಫ್ ಸಖಾಫಿ ಕಿನ್ಯ ಆಶೀರ್ವಚನಗೈಯಲಿರುವರು.

ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ದಯಾನಂದ ಹೆಜ್ಮಾಡಿ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್ ಮುಖ್ಯ ಅತಿಥಿಗಳಾಗಿರುವರು. 

ಸಮಾರಂಭದಲ್ಲಿ ಹೆಜಮಾಡಿ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸರ್ವ ಸದಸ್ಯರು, ಎಸ್‍ಎಲ್‍ಆರ್‍ಎಮ್ ಘಟಕದ ಸಿಬ್ಬಂದಿಗಳು, ಹೆಜಮಾಡಿ ಕೊರೊನಾ ವಾರಿಯರ್ಸ್, ಆಶಾ ಕಾರ್ಯಕರ್ತೆಯರು, ವಿಮಾನ ತಯಾರಕ ಪುಷ್ಪರಾಜ್ ಕೋಟ್ಯಾನ್ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಪಿಎಚ್‍ಡಿ ಪದವೀಧರರಾದ ಡಾ.ಸುಪ್ರಭಾ ಹರೀಶ್ ಮತ್ತು ಡಾ. ಯಾದವ ವಿ.ಕೆ.ಯವರನ್ನು ಸನ್ಮಾನಿಸಲಾಗುವುದು ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ರೋಲ್ಫಿ ಡಿಕೋಸ್ತಾ, ಕೋಶಾಧಿಕಾರಿ ಶೇಖಬ್ಬ ಹಾಜಿ ಕೋಟೆ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಸನಾ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಜತೆ ಕಾರ್ಯದರ್ಶಿ ಸುಭಾಸ್ ಜಿ.ಸಾಲ್ಯಾನ್, ಸಂಘಟನಾ ಕಾರ್ಯದರ್ಶಿ ಸಂಜೀವ ಟಿ., ಗ್ರಾಪಂ ಸದಸ್ಯರಾದ ಪಾಂಡುರಂಗ ಕರ್ಕೇರ, ಶಿವ ಪೂಜಾರಿ ಮತ್ತು ರೇಷ್ಮಾ ಮೆಂಡನ್, ವಿಜಯ ಕುಮಾರ್ ಕೋಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News