ಮಂಗಳೂರು: ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಯುವತಿಯ ದರೋಡೆ; ಇಬ್ಬರ ಬಂಧನ
Update: 2021-03-26 19:41 IST
ಮಂಗಳೂರು, ಮಾ.26: ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಅಸಭ್ಯವಾಗಿ ವರ್ತಿಸಿ, ಆಕೆಯಲ್ಲಿದ್ದ ಒಂದು ಸಾವಿರ ರೂ. ದೋಚಿದ ಆರೋಪದಲ್ಲಿ ಇಬ್ಬರು ಬಿಹಾರ ಮೂಲದ ಯುವಕರನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಅರರಿಯಾ ಜಿಲ್ಲೆಯ ಅಜಯ ಕುಮಾರ್ ಹಾಗೂ ಸುಭೋದ್ ಕುಮಾರ್ ಬಂಧಿತ ಆರೋಪಿಗಳು. ಯುವತಿ ಕೆಲಸ ಮುಗಿಸಿ ಬಸ್‌ನಲ್ಲಿ ಬಂದು ಸಂಕದಡಿ ಎಂಬಲ್ಲಿರುವ ಮನೆಗೆ ರಾತ್ರಿ 7:30ರ ವೇಳೆಗೆ ನಡೆದುಕೊಂಡು ಹೋಗುತ್ತಿದ್ದಳು. ಯುವತಿಯನ್ನು ಹಿಂಬಾಲಿಸಿದ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.