ಮೀನುಗಾರರ ಸಾಲ ಮನ್ನಾ: ಆಧಾರ್ ಸ್ವಯಂ ದೃಢೀಕರಣ ಸಲ್ಲಿಸಲು ಸೂಚನೆ

Update: 2021-03-26 17:07 GMT

ಉಡುಪಿ, ಮಾ.26: ವಾಣಿಜ್ಯ ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಮೂಲಕ ಮೀನುಗಾರರು ಶೇ.2 ಮತ್ತು ಶೂನ್ಯ ಬಡ್ಡಿದರದಲ್ಲಿ 2017-18 ಮತ್ತು 2018-19 ಸಾಲಿನಲ್ಲಿ ಪಡೆದ ಸಾಲ ಮರುಪಾವತಿಗೆ ಬಾಕಿ ಇರುವ ಅಸಲು ಮನ್ನಾ ಆದ ಮೊತ್ತವು ಫಲಾನುವಿಗಳ ಖಾತೆಗೆ ಜಮಾ ಮಾಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಆಧಾರ್ ದೃಢೀಕೃತಗೊಂಡು ಆಧಾರ್ ಸಮಸ್ಯೆಯಿಂದಾಗಿ ಸಾಲ ಮನ್ನಾದ ಹಣ ಜಮಾಗೊಳ್ಳದ ಅರ್ಹ ಪಲಾನುವಿಗಳು ಸಂಬಂಧಪಟ್ಟ ಬ್ಯಾಂಕ್ ಶಾಖೆಗಳಿಗೆ ತೆರಳಿ ತಮ್ಮ ಆಧಾರ್ ಬಗ್ಗೆ ಸ್ವಯಂ ದೃಢೀಕರಣ ಪತ್ರವನ್ನು ಕೂಡಲೇ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News