×
Ad

ಉಡುಪಿ ಜಿಲ್ಲೆಯಲ್ಲಿ ಮಾಸ್ಕ್ ಧರಿಸದವರಿಂದ ಒಂದೇ ದಿನ 35,600 ರೂ. ದಂಡ ವಸೂಲಿ

Update: 2021-03-26 22:38 IST

ಉಡುಪಿ, ಮಾ.26: ಜಿಲ್ಲೆಯಲ್ಲಿ ಕೋವಿಡ್-19 ಎರಡನೆ ಅಲೆ ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಡಳಿತ ಮಾ.25ರಂದು ಒಂದೇ ದಿನ ಮಾಸ್ಕ್ ಧರಿಸದೆ ಕೋವಿಡ್-19 ನಿಯಮ ಉಲ್ಲಂಘನೆ ಮಾಡಿದ ಜಿಲ್ಲೆಯ ಒಟ್ಟು 304 ಮಂದಿಯಿಂದ ಒಟ್ಟು 35,600 ರೂ. ದಂಡ ವಸೂಲಿ ಮಾಡಿದೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 61 ಮಂದಿಯಿಂದ 11,300 ರೂ., ಜಿಲ್ಲೆಯ ಪಂಚಾಯತ್ ವ್ಯಾಪ್ತಿಯಲ್ಲಿ 17 ಮಂದಿಯಿಂದ 1,700ರೂ., ಅಬಕಾರಿ ಇಲಾಖೆ 21 ಮಂದಿಯಿಂದ 2,100 ರೂ., ಕಂದಾಯ ಇಲಾಖೆ 46 ಮಂದಿಯಿಂದ 4,600ರೂ. ಹಾಗೂ ಪೊಲೀಸ್ ಇಲಾಖೆ 159 ಮಂದಿಯಿಂದ 15,900ರೂ. ದಂಡ ವಸೂಲಿ ಮಾಡಿವೆ.

ಈ ಮೂಲಕ ದಿನದಲ್ಲಿ ಒಟ್ಟು 304 ಮಂದಿಯಿಂದ 35,600ರೂ. ಸೇರಿದಂತೆ ಈವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 24,355 ಮಂದಿಯಿಂದ ದಂಡ ರೂಪದಲ್ಲಿ ಒಟ್ಟು 26,10,800ರೂ. ಗಳನ್ನು ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News