ಹೆಚ್ಚುವರಿ ವರದಕ್ಷಿಣೆಗಾಗಿ ಕಿರುಕುಳ: ದೂರು
ಉಡುಪಿ, ಮಾ.26: ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಪೀಡಿಸಿ ಮಹಿಳೆಗೆ ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ಎಸಗಿರುವ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿವಾಕರ ಪೂಜಾರಿ ಮತ್ತು ಬ್ರಹ್ಮಾವರ ಪೇತ್ರಿ ಶಾನರಬೆಟ್ಟುವಿನ ಶ್ಯಾಮಲಾ ಪೂಜಾರಿ(39) ಎಂಬವರಿಗೆ 2010ರಲ್ಲಿ ವಿವಾಹ ಆಗಿದ್ದು, ಮದುವೆ ಸಂದರ್ಭ ಆರೋಪಿ ದಿವಾಕರ ಪೂಜಾರಿ ವರದಕ್ಷಿಣೆ ಹಣವನ್ನು ಪಡೆದುಕೊಂಡಿದ್ದನು. ನಂತರ ಪತಿ, ಶ್ಯಾಮಲಾಗೆ ಹೊಡೆದು ಬಡಿದು ಅವಾಚ್ಯ ಶಬ್ದದಿಂದ ಬೈದು ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿರುವುದಾಗಿ ದೂರಲಾಗಿದೆ.
ಈ ಕೃತ್ಯಕ್ಕೆ ಉಳಿದ ಆರೋಪಿಗಳಾದ ರೂಪಾ, ಅತ್ತೆ ರತಿ ಪೂಜಾರ್ತಿ, ನಾದಿನಿ ಪುಷ್ಪ ಹಾಗೂ ನಾದಿನಿ ಪತಿ ಶಂಕರ ಪೂಜಾರಿ ಸಹಕಾರ ನೀಡಿದ್ದು, ಇವರೆಲ್ಲರು ಹೆಚ್ಚಿನ ವದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರಲಾಗಿದೆ. ಮಾ.24ರಂದು ಸಂಜೆ ಪತಿ ದಿವಾಕರ ಪೂಜಾರಿ, ಶ್ಯಾಮಲಾ ಅವರ ಕುತ್ತಿಗೆಯ ಹಿಂಭಾಗಕ್ಕೆ ಹೊಡೆದು ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.