ಗ್ರಾಪಂ ನಿರ್ಲಕ್ಷ್ಯಕ್ಕೆ ಪಾಚಿ ಹಿಡಿದ ಮದ್ಮಲ್ ಕೆರೆ: ಸ್ಥಳೀಯರ ಆರೋಪ
ಉಡುಪಿ, ಮಾ.26: ಹಾವಂಜೆ ಗ್ರಾಮದ ಕೀಳಂಜೆಯ ಪರಿಸರದಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯ ಯೋಜನೆ ಯಡಿಯಲ್ಲಿ ನಿರ್ಮಾಣಗೊಂಡ ಸುಸಜ್ಜಿತವಾದ ಕುಡಿಯಲು ಯೋಗ್ಯವಿರುವ ಮದ್ಮಲ್ ಕೆರೆ ಇದೀಗ ನಿವಹರ್ಣೆ ಇಲ್ಲದೆ ನಿರ್ಲಕ್ಷಕ್ಕೆ ಗುರಿಯಾಗಿದೆ.
ಮೂರು ನಾಲ್ಕು ವರ್ಷಗಳ ಹಿಂದೆ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ಮುತವರ್ಜಿಯಲ್ಲಿ ಈ ಕೆರೆ ನಿರ್ಮಿಸಲಾಗಿತ್ತು. ಆದರೆ ಕೆರೆ ಪಕ್ಕದಲ್ಲಿದ್ದ ಬೃಹತ್ ಗಾತ್ರದ ಮರವೊಂದು ಕೆರೆಗೆ ಬಿದ್ದು ಸಂಪೂರ್ಣ ನೀರು ಕಲುಷಿತಗೊಂಡಿತ್ತು. ನಂತರದ ದಿನಗಳಲ್ಲಿ ಗ್ರಾಪಂಗೆ ಪದೇಪದೇ ತಿಳಿಸಿ ಆ ಮರವನ್ನು ಅಲ್ಲಿಂದ ತೆರವುಗೊಳಿಸಲಾಗಿತ್ತು.
ಆದರೆ ನಂತರದ ವರ್ಷಗಳಲ್ಲಿ ಈ ಕೆರೆ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದ್ದು, ನೀರು ದುವಾರ್ಸನೆ ಬೀರುತ್ತಿದೆ. ಪಂಚಾಯಿತಿಗೆ ಮಾಹಿತಿ ನೀಡಿದರೂ ಸ್ವಚ್ಛತೆ ಕಡೆಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಆದುದರಿಂದ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕು. ಈ ಭಾಗದಲ್ಲಿ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿವುದ ರಿಂದ ತಕ್ಷಣ ಈ ಕೆರೆಯ ಹೂಳೆತ್ತುವಿಕೆ ಮತ್ತು ಕೆರೆಯ ಸುತ್ತಮುತ್ತ ಬೆಳೆದಿರುವ ಗಿಡಗಂಟೆಗಳನ್ನು ತೆಗೆಯಬೇಕು ಎಂದು ಸ್ಥಳೀಯ ಹಿರಿಯ ಕೃಷಿಕ ಕೃಷ್ಣಯ್ಯ ಶೆಟ್ಟಿ ಒತ್ತಾಯಿಸಿದ್ದಾರೆ.