ಹೆಜಮಾಡಿ: ಟೋಲ್ ವಿನಾಯಿತಿ ಮನವಿಗೆ ಸ್ಪಂದಿಸದ ಅಧಿಕಾರಿಗಳು; ಸ್ಥಳೀಯರ ಆರೋಪ

Update: 2021-03-26 17:45 GMT

ಹೆಜಮಾಡಿ: ಹೆಜಮಾಡಿ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯ ನಿರ್ಣಯದಂತೆ ಹೆಜಮಾಡಿ ಕೋಡಿ ಭಾಗಕ್ಕೆ ಸಂಚರಿಸುವ ಸರ್ವಿಸ್ ಬಸ್ಸುಗಳಿಗೆ ಮತ್ತು ಶಾಲಾ ಬಸ್ಸುಗಳಿಗೆ ಟೋಲ್ ಪಡೆಯುವುದನ್ನು ಖಂಡಿಸಿ ಹೆಜಮಾಡಿ ಗ್ರಾಮಪಂಚಾಯತ್ ನಿಂದ  ಹೆಜಮಾಡಿಯ ನವಯುಗ ಟೋಲ್ ಪ್ಲಾಜಾದ ಪ್ರಬಂಧಕರಿಗೆ ಮಾರ್ಚ್ 25, ಗುರುವಾರ ಮನವಿ ಸಲ್ಲಿಸಲಾಗಿತ್ತು. ಮಾ. 26, ಶುಕ್ರವಾರ ಬೆಳಿಗ್ಗೆ 9 ಗಂಟೆಯೊಳಗೆ ಸ್ಪಂದಿಸುವ ಭರವಸೆ ನೀಡಿದ ಟೋಲ್ ಪ್ಲಾಜಾದ ಪ್ರಬಂಧಕರು ಇದೀಗ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಪಡುಬಿದ್ರಿ ಪೋಲಿಸ್ ಠಾಣೆಗೆ ಸೂಕ್ತ  ಕ್ರಮಕ್ಕಾಗಿ ಹೆಜಮಾಡಿ ಗ್ರಾಮ ಪಂಚಾಯತ್ ನಿಂದ ಮನವಿ ನೀಡಲಾಯಿತು.

ಹೆಜಮಾಡಿ ಗ್ರಾಮವು ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಗಡಿ ಭಾಗವಾಗಿದ್ದು, ಹೆಜಮಾಡಿ ಕೋಡಿಯ ವಿದ್ಯಾರ್ಥಿಗಳು ಹಾಗೂ ನಾಗರಿಕರು ಹೆಚ್ಚಾಗಿ ಮಂಗಳೂರನ್ನು ಅವಲಂಬಿಸಿರುತ್ತಾರೆ. ಬಸ್ಸುಗಳಿಗೆ ಟೋಲ್ ಪಾವತಿಸಬೇಕಾದ ಕಾರಣ ಬಸ್ಸುಗಳು ಈ ಭಾಗಕ್ಕೆ ಬಾರದೆ ಜನರಿಗೆ ತೊಂದರೆ ಆಗಿದೆ. ಆದ್ದರಿಂದ ಹೆಜಮಾಡಿ ಕೋಡಿಗೆ  ಬರುವ ಸರ್ವಿಸ್ ಬಸ್ಸು ಹಾಗೂ ಶಾಲಾ ಬಸ್ಸುಗಳಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭ ಹೆಜಮಾಡಿ ಗ್ರಾಮಪಂಚಾಯತ್ ಅಧ್ಯಕ್ಷರಾದ ಪ್ರಾಣೇಶ್ ಹೆಜಮಾಡಿ, ಉಪಾಧ್ಯಕ್ಷರಾದ ಪವಿತ್ರ ಗಿರೀಶ್, ಸದಸ್ಯರು, ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News