ಮಾ. 27ರಿಂದ ಎ.4ರವರೆಗೆ ಫೋರಂ ಮಾಲ್‍ನಲ್ಲಿ ವಿಶೇಷ ಕೊಡುಗೆ
Update: 2021-03-27 10:39 IST
ಮಂಗಳೂರು, ಮಾ.27: ಮಂಗಳೂರಿನ ಪ್ರತಿಷ್ಠಿತ ಫೋರಂ ಫಿಝಾ ಮಾಲ್ ಗ್ರಾಹಕರ ಸಂತೋಷಕ್ಕಾಗಿ ವಿಶೇಷ ಕೊಡುಗೆಯನ್ನು ನೀಡುತ್ತಿದೆ.
ಫ್ಯಾಶನ್, ಗೃಹೋಪಯೋಗಿ ವಸ್ತುಗಳು, ಪಾದರಕ್ಷೆ, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೇ ಸುಮಾರು 300ಕ್ಕೂ ಅಧಿಕ ಬ್ರಾಂಡ್‍ಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತಿವೆ. ಖರೀದಿಸುವ ಗ್ರಾಹಕರಿಗೆ ಖಚಿತ ಬಹುಮಾನದ ಅವಕಾಶವಿದೆ.
ಮಾರ್ಚ್ 27ರಿಂದ ಎಪ್ರಿಲ್ 4ರ ವರೆಗೆ ರೂ. 2,500ರ ಖರೀದಿಗೆ ರೂ. 500 ಗಿಫ್ಟ್ ಕೂಪನ್, ರೂ. 5000 ಖರೀದಿಗೆ 5 ಗ್ರಾಂ ಬೆಳ್ಳಿ ನಾಣ್ಯ ಹಾಗೂ ರೂ. 12,000 ಮೇಲಿನ ಖರೀದಿಗೆ ಜೆಬಿಎಲ್ ಬ್ಲೂಟೂಥ್ ಹಾಗೂ ದಿನದ ಅತೀ ಹೆಚ್ಚಿನ ಖರೀದಿದಾರರೊಬ್ಬರಿಗೆ ಒಂದು ಗ್ರಾಂ ಚಿನ್ನದ ನಾಣ್ಯ ದೊರಕಲಿದೆ. ಹೆಚ್ಚಿನ ಖರೀದಿಗೆ ಹೆಚ್ಚು ಮೌಲ್ಯದ ಖಚಿತ ಬಹುಮಾನ ಪೆಡೆಯುವ ಅವಕಾಶವಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟನೆ ತಿಳಿಸಿದೆ.