ಸ್ಪಾರ್ ನಲ್ಲಿ ಶೇ.50ರವರೆಗೆ ರಿಯಾಯಿತಿ
ಮಂಗಳೂರಿನ ಪಾಂಡೇಶ್ವ ರದಲ್ಲಿನ ಫೋರಮ್ ಫಿಝ್ಝ ಮಾಲ್ ಹಾಗೂ ಕೆ.ಎಸ್.ರಾವ್ ರಸ್ತೆಯಲ್ಲಿನ ಸಿಟಿ ಸೆಂಟರ್ ಮಾಲ್‌ನಲ್ಲಿರುವ ಸ್ಪಾರ್ ಹೈಪರ್ ಮಾರ್ಕೆಟ್‌ನಲ್ಲಿ ಗ್ರಾಹಕರಿಗೆ ಸುವರ್ಣಾವಕಾಶ ಕಲ್ಪಿಸಲಾಗುತ್ತಿದ್ದು, ಶೇ.50 ರವರೆಗೆ ರಿಯಾಯಿತಿ ಸೌಲಭ್ಯವನ್ನು ಘೋಷಿಸಿದೆ.
ಸ್ಪಾರ್‌ನಲ್ಲಿ ಅತಿ ಅತ್ಯಾಕರ್ಷಕ ಬೆಲೆಯಲ್ಲಿ ದಿನಸಿ ವಸ್ತುಗಳ ಖರೀದಿಗೆ ಗ್ರಾಹಕರು ಮುಗಿಬಿಳುತ್ತಿದ್ದು, ಜತೆಗೆ ಸಂಸ್ಥೆಯಿಂದಲೂ ಹಲವು ಕೊಡುಗೆಗಳನ್ನು ಪ್ರಕಟಿಸುತ್ತಿರುವುದು ಮಾರಾಟಕ್ಕೆ ಇಂಬು ನೀಡುತ್ತಿದೆ. 25 ಕೆ.ಜಿ.ತೂಕದ ಎನ್‌ಜಿಕೆ ಸೋನಾ ಮಸೂರಿ ಅಕ್ಕಿ, ಒಂದು ಕೆ.ಜಿ.ಸ್ಪಾರ್ ಗೋಧಿ ಹಿಟ್ಟು, ಒಂದು ಲೀಟರ್‌ನ ಸನ್ ಪ್ರೀಮಿಯಂ ಸನ್‌ಫ್ಲವರ್ ಆಯಿಲ್ ಪೌಚ್, ಒಂದು ಕೆ.ಜಿ. ಉಪ್ಪು, ಒಂದು ಕೆ.ಜಿ. ಸಕ್ಕರೆಯ ಸೂಪರ್ ಸೇವರ್ ಪ್ಯಾಕ್‌ನ ವೌಲ್ಯವು 1,406 ರೂ. ಆಗಲಿದೆ. ಗ್ರಾಹಕರಿಗಾಗಿ ಇದನ್ನು ಕೇವಲ 999 ರೂ.ಗೆ ನೀಡಲಾಗುತ್ತಿದೆ. ಇದರಿಂದ ಗ್ರಾಹಕರಿಗೆ ಅಧಿಕ ಹಣ ಉಳಿತಾಯವಾಗಲಿದೆ.
ಚರ್ಮ ಮತ್ತು ಸೌಂದರ್ಯ ಆರೈಕೆ ವಿಭಾಗದಲ್ಲಿಯೂ ಗ್ರಾಹಕರಿಗೆ ಶೇ.50ರವರೆಗೆ ವಿಶೇಷ ರಿಯಾಯಿತಿ ಕಲ್ಪಿಸಲಾಗುತ್ತಿದೆ. ಡಾ.ಭಟ್ರಾಸ್ ಹ್ಯಾಂಡ್ ವಾಶ್, ಎವರ್‌ಯೂತ್ ಆಯಿಲ್ ಕ್ಲಿಯರ್, ತುಳಸಿ-ಅರಿಶಿಣ ಮಿಶ್ರಿತ ಫೇಸ್‌ವಾಶ್, ಎನ್ವಿ ಬೆವಿಚ್ ಪರ್ಫ್ಯೂಮ್, ಪರಿಝ್ ಪ್ಯಾಂಟಿ ಲೈನರ್ಸ್, ಯಾರ್ಡ್‌ಲಿ ಬಾಡಿ ಲೋಶನ್ ಸೇರಿದಂತೆ ಸೌಂದರ್ಯವರ್ಧಕ ಸಾಮಾಗ್ರಿಗಳು ರಿಯಾಯಿತಿ ದರದಲ್ಲಿ ಲಭ್ಯ ಇವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.