ಬಾಂಗ್ಲಾದೇಶಕ್ಕೆ ಭೇಟಿ ನೀಡಿರುವ ಪ್ರಧಾನಿ ವೀಸಾವನ್ನು ಏಕೆ ರದ್ದುಗೊಳಿಸಬಾರದು: ಮಮತಾ ಬ್ಯಾನರ್ಜಿ

Update: 2021-03-27 12:23 GMT

ಕೋಲ್ಕತಾ: ಬಾಂಗ್ಲಾದೇಶ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಶನಿವಾರ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಬೆಳಗ್ಗೆ ಆರಂಭವಾಗಿರುವ  ಎಂಟು ಹಂತದ ವಿಧಾನಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ ಮತದಾರರ ಮೇಲೆ ಪ್ರಭಾವ ಬೀರಲು ಪ್ರಧಾನಿ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

"ಇಲ್ಲಿ ಚುನಾವಣೆಗಳು ನಡೆಯುತ್ತಿವೆ. ಅವರು (ಪ್ರಧಾನಿ) ಬಾಂಗ್ಲಾದೇಶಕ್ಕೆ ಹೋಗಿ ಬಂಗಾಳದ ಕುರಿತು ಉಪನ್ಯಾಸ ನೀಡುತ್ತಾರೆ. ಇದು ಚುನಾವಣೆಯ ನೀತಿ ಸಂಹಿತೆಯ ಸಂಪೂರ್ಣ ಉಲ್ಲಂಘನೆಯಾಗಿದೆ" ಎಂದು ಮಮತಾ ಬ್ಯಾನರ್ಜಿ ಖರಗ್‌ಪುರದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದರು..

"2019 ರ ಲೋಕಸಭಾ ಚುನಾವಣೆಯಲ್ಲಿ, ಬಾಂಗ್ಲಾದೇಶದ ನಟರೊಬ್ಬರು ನಮ್ಮ ರ್ಯಾಲಿಯಲ್ಲಿ ಪಾಲ್ಗೊಂಡಾಗ, ಬಿಜೆಪಿ ಬಾಂಗ್ಲಾದೇಶ ಸರಕಾರದೊಂದಿಗೆ ಮಾತನಾಡಿ ಅವರ ವೀಸಾವನ್ನು ರದ್ದುಗೊಳಿಸಿತ್ತು. ಇಲ್ಲಿ ಮತದಾನ ನಡೆಯುತ್ತಿರುವಾಗ, ನೀವು (ಪ್ರಧಾನಿ) ಒಂದು ನಿರ್ದಿಷ್ಠ ಜನರ ಮತ ಪಡೆಯಲು ಬಾಂಗ್ಲಾದೇಶಕ್ಕೆ ಹೋಗಿದ್ದೀರಿ. ಏಕೆ ' ನಿಮ್ಮ ವೀಸಾವನ್ನು ರದ್ದುಗೊಳಿಸಬಾರದು? ನಾವು ಈ ಕುರಿತು  ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ’’ ಎಂದು ಅವರು ಹೇಳಿದರು.

ಮಾಟುವಾ ಸಮುದಾಯದ ಆಧ್ಯಾತ್ಮಿಕ ಗುರು ಹರಿಚಂದ್ ಠಾಕೂರ್ ಅವರ ಜನ್ಮಸ್ಥಳವಾದ ಬಾಂಗ್ಲಾದೇಶದ ಒರಕಂಡಿಯಲ್ಲಿರುವ ದೇವಸ್ಥಾನವೊಂದರಲ್ಲಿ ಪ್ರಧಾನ ಮಂತ್ರಿ ಪ್ರಾರ್ಥನೆ ಸಲ್ಲಿಸುತ್ತಿರುವುದನ್ನು ಮಮತಾ ಬ್ಯಾನರ್ಜಿ ಉಲ್ಲೇಖಿಸಿದರು..

ಒರಕಂಡಿ ಹಿಂದೂ ಮಾಟುವಾ ಸಮುದಾಯದ ನೂರಾರು ಜನರ ವಾಸಸ್ಥಾನವಾಗಿದೆ, ಅವರಲ್ಲಿ ಹೆಚ್ಚಿನವರು ಈಗ ಪಶ್ಚಿಮ ಬಂಗಾಳದ ನಿವಾಸಿಗಳು ಹಾಗೂ ಚುನಾವಣೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News