ಸಣ್ಣ ವಿಮಾನ ಪತನ: ಮೂವರು ಪೈಲಟ್ ಗಳಿಗೆ ಗಾಯ
Update: 2021-03-27 18:17 IST
ಹೊಸದಿಲ್ಲಿ: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಹೊಲವೊಂದರಲ್ಲಿ ಸಣ್ಣ ವಿಮಾನವೊಂದು ಪತನವಾಗಿದ್ದು, ವಿಮಾನದಲ್ಲಿದ್ದ ಮೂವರು ಪೈಲಟ್‌ಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೂವರು ಪೈಲಟ್‌ಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಭೋಪಾಲ್ ಪೊಲೀಸ್ ಅಧಿಕಾರಿ ಅರುಣ್ ಶರ್ಮಾ ತಿಳಿಸಿದ್ದಾರೆ.
ನಗರದ ಗಾಂಧಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಮಾನ ಪತನವಾಗಿದೆ ಎಂದು ಅವರು ಹೇಳಿದರು