×
Ad

ಉಡುಪಿ: ಭಾರಿ ರಿಯಾಯಿತಿಯಲ್ಲಿ ಗಾರ್ಮೆಂಟ್ಸ್ ಮಾರಾಟ ಮೇಳ

Update: 2021-03-27 19:14 IST

ಉಡುಪಿ, ಮಾ.27: ಉಡುಪಿಯ ಕರಾವಳಿ ಬೈಪಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿರುವ ಮಣಿಪಾಲ್ ಇನ್ ಹೋಟೆಲ್ ನಲ್ಲಿ ಮಾ.26ರಿಂದ ಆರಂಭಗೊಂಡಿರುವ ನೂರಕ್ಕೂ ಅಧಿಕ ಪ್ರಸಿದ್ಧ ಕಂಪನಿಗಳ ಬ್ರಾಂಡೆಡ್ ಗಾರ್ಮೆಂಟ್ಸ್ ಮಾರಾಟ ಮೇಳಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಈಗಾಗಲೇ ಮಂಗಳೂರಿನ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆಶನಲ್ ಸೆಂಟರ್‌ನಲ್ಲಿ ಮೂರು ದಿನಗಳ ಮೇಳ ಆಯೋಜಿಸಿ ಯಶಸ್ವಿಯಾದ ಬಳಿಕ ಉಡುಪಿಯಲ್ಲಿ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರಿಗೆ ಸಹಕಾರ ಹಾಗೂ ಶಾಂಪಿಂಗ್‌ಗೆ ಪೂರಕವಾಗುವ ನಿಟ್ಟಿನಲ್ಲಿ ಈ ಮೇಳವು ಮಾ.28ರವರೆಗೆ ಬೆಳಗ್ಗೆ 10ರಿಂದ ರಾತ್ರಿ 9ವರೆಗೆ ನಡೆಯಲಿದೆ.

ಈ ನಡುವೆ ವಾರಂತ್ಯದ ವೇಳೆ ಹೆಚ್ಚು ಸಾರ್ವಜನಿಕರು ಬರುವ ನಿರೀಕ್ಷೆ ಯಿಂದ ಇದಕ್ಕಾಗಿ ಎಲ್ಲ ರೀತಿಯ ಸಿದ್ಧತೆ ಹಾಗೂ ಹೆಚ್ಚುವರಿ ಸ್ಟಾಕ್‌ ಗಳನ್ನು ಸಂಗ್ರಹಿಸಲಾಗಿದೆ. ಕೋವಿಡ್ -19ರಿಂದಾಗಿ ಮಾರುಕಟ್ಟೆಯಲ್ಲಿನ ಏರುಪೇರು ಗಳನ್ನು ಸರಿದೂಗಿಸಲು ಈ ಮೇಳ ಆಯೋಜಿಸಲಾಗಿದೆ.
ಕೊವಿಡ್ 19ರ ಸಂದರ್ಭದಲ್ಲಿ ಕಾರ್ಮಿಕರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಉತ್ಪಾದನೆ ಸ್ಥಗಿತಗೊಳಿಸಲಿಲ್ಲ. ಉತ್ಪಾದನೆಯಾದಷ್ಟು ಪ್ರಮಾಣದಲ್ಲಿ ಮಾರಾಟವಾಗದ ಹಿನ್ನೆಲೆಯಲ್ಲಿ ಹೆಚ್ಚು ಸಂಗ್ರಹ ಉಳಿಸಲಾಗಿದೆ. ಈ ಸಂಗ್ರಹಗಳನ್ನು ವಿಲೇವಾರಿ ಮಾಡಲು ಉತ್ಪಾದನಾ ವೆಚ್ಚಕ್ಕಿಂತಲೂ ಕಡಿಮೆ ದರದಲ್ಲಿ ಅಂದರೆ ಶೇ.80ರ ವರೆಗೆ ರಿಯಾಯಿತಿಯನ್ನು ಮಾರಾಟ ಮೇಳದಲ್ಲಿ ಘೋಷಿಸಲಾಗಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಕೋವಿಡ್ 19 ಕಾರಣದಿಂದ ದೇಶದಾದ್ಯಂತ ಲಾಕ್‌ಡೌನ್ ಇದ್ದುದರಿಂದ ಕೋಟ್ಯಂತರ ರೂ. ಬೆಲೆ ಬಾಳುವ ಗಾರ್ಮೆಂಟ್ಸ್‌ಗಳು ಗೋಡೋನ್ ನಲ್ಲಿ ಬಾಕಿಯಾಗಿತ್ತು. ಇದನ್ನು ಕಂಪನಿಗಳು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ನೀಡಲು ಈ ಮೇಳ ಆಯೋಜಿಸಲಾಗಿದೆ. ರಿಟೇಲ್‌ನಲ್ಲಿ 4 ಸಾವಿರ ರೂ. ಇರುವ ಗಾರ್ಮೆಂಟ್ಸ್‌ಗಳು ಈ ಮೇಳದಲ್ಲಿ ಕೇವಲ 350ರೂ.ನಿಂದ 550 ರೂ. ಒಳಗಡೆ ಲಭಿಸಲಿದೆ.

ಬ್ರಾಂಡೆಡ್ ಫಾರ್ಮಲ್ ಶರ್ಟ್ ಕೇವಲ 650 ರೂ. ನಿಂದ 1 ಸಾವಿರ ರೂ. ಒಳಗಡೆ ಲಭ್ಯವಿದೆ. ಮೊಟೆ ಕಾರ್ಲೊ, ಬ್ಯಾಕ್ಬೆರಿ, ಕಿಲ್ಲರ್, ಇಂಡಿಗೋ ನೇಷನ್ ಸೇರಿದಂತೆ ದೇಶ, ವಿದೇಶದ ಪ್ರಖ್ಯಾತ ಕಂಪನಿಗಳ ಉತ್ಪನ್ನಗಳು ಈ ಮೇಳದಲ್ಲಿ ಇದೆ. ರಿಯಾಯಿತಿ ದರದಲ್ಲಿ ಖರೀದಿಗೆ ಗ್ರಾಹಕರಿಗೆ ಇದೊಂದು ಸುವರ್ಣಾವಕಾಶವಾಗಲಿದೆ. ಗ್ರಾಹಕರು ಖರೀದಿಗೆ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸೇರಿದಂತೆ ಎಲ್ಲ ಡಿಜಿಟಲ್ ಪಾವತಿ ಸೌಲಭ್ಯ ವನ್ನು ಬಳಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News