ಪರ್ಕಳ: ಮಾ.28ರಂದು ಸೂಪರ್ಮೂನ್ ವೀಕ್ಷಣೆಗೆ ಅವಕಾಶ
Update: 2021-03-27 20:18 IST
ಉಡುಪಿ, ಮಾ.27:ಪರ್ಕಳದ ಎಂಐಟಿ ಉದ್ಯೋಗಿ, ಆರ್.ಮನೋಹರ್ ನೂತನ ತಂತ್ರಜ್ಞಾನದೊಂದಿಗೆ ಇನ್ನಷ್ಟು ಉತ್ತಮ ಪಡಿಸಿದ ತಮ್ಮ ಟೆಲಿಸ್ಕೋಪ್ ಮೂಲಕ ನಾಳಿನ ಸೂಪರ್‌ಮೂನ್‌ನ್ನು ನೋಡುವ ಅವಕಾಶವನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಿದ್ದಾರೆ.
ಪರ್ಕಳದ ಸ್ವಾಗತ್ ಹೋಟೆಲಿನ ಮುಂಭಾಗ ಇರುವ ಪಾಟೀಲ್ ಕ್ಲೋತ್ ಸ್ಟೋರ್‌ನ ಮೂರನೇ ಮಹಡಿಯಲ್ಲಿ ಮಾ.28ರ ಸಂಜೆ 5:30ರಿಂದ ಹೋಳಿ ಹುಣ್ಣಿಮೆಯ ಚಂದ್ರೋದಯದ ಸುಂದರ ವಿಹಂಗಮ ನೋಟವನ್ನು ಟೆಲಿಸ್ಕೋಪ್ ಮೂಲಕ ನೋಡುವ ಅವಕಾಶ ಕಲ್ಪಿಸಲಾಗಿದೆ. ಖಗೋಳ ಆಸಕ್ತರು ಅಪೂರ್ವ ಕ್ಷಣವನ್ನು ವೀಕ್ಷಿಸಲು ಉಚಿತ ಅವಕಾಶವಿದೆ ಎಂದು ಕಾರ್ಯಕ್ರಮ ಸಂಘಟಕ ಗಣೇಶ ರಾಜ್ ಸರಳಬೆಟ್ಟು ತಿಳಿಸಿದ್ದಾರೆ.