ಉಡುಪಿ: ಎಂಐಟಿಯಲ್ಲಿ ಶನಿವಾರ 126 ಕೋವಿಡ್ ಪ್ರಕರಣ
ಉಡುಪಿ, ಮಾ.27: ಉಡುಪಿ ಜಿಲ್ಲೆಯಲ್ಲಿ ಶನಿವಾರ ಒಟ್ಟು 156 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಇವರಲ್ಲಿ 126 ಮಂದಿ ಈಗಾಗಲೇ ಕಂಟೈಮೆಂಟ್ ರೆನ್‌ಆಗಿ ಘೋಷಿಸಲಾಗಿರುವ ಮಣಿಪಾಲ ಎಂಐಟಿ ಕ್ಯಾಂಪಸ್ ಒಳಗಿನ ವಿದ್ಯಾರ್ಥಿ ಗಳಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು 126 ಮಂದಿಯಲ್ಲಿ ಹೊಸದಾಗಿ ಕೊರೋನ ಸೋಂಕು ಪತ್ತೆಯಾಗುವ ಮೂಲಕ ಈವರೆಗೆ ಎಂಐಟಿ ಕ್ಯಾಂಪಸ್ ಒಂದರಲ್ಲೇ ಒಟ್ಟು 896 ಪಾಸಿಟಿವ್ ಪ್ರಕರಣ ಪತ್ತೆಯಾದಂ ತಾಗಿದೆ. ಇಂದು 171 ಮಂದಿ ರೋಗದಿಂದ ಗುಣಮುಖರಾದರೆ, 737 ಮಂದಿ ಇನ್ನೂ ಕೊರೋನಕ್ಕೆ ಸಕ್ರಿಯರಾಗಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಶನಿವಾರ ಜಿಲ್ಲೆಯಲ್ಲಿ ಪಾಸಿಟಿವ್ ಬಂದ ಒಟ್ಟು 156 ಮಂದಿಯಲ್ಲಿ ಉಡುಪಿ ತಾಲೂಕಿನವರು ಒಟ್ಟು 134 ಮಂದಿ. ಇವರಲ್ಲಿ ಎಂಐಟಿಯ ವಿದ್ಯಾರ್ಥಿಗಳ ಪಾಲು 126 ಆದರೆ ಉಳಿದ ಎಂಟು ಮಂದಿ ಇತರರು. ಕುಂದಾಪುರ ತಾಲೂಕಿನ 8 ಮಂದಿ ಹಾಗೂ ಕಾರ್ಕಳ ತಾಲೂಕಿನ 13 ಮಂದಿ ಇಂದು ಸೋಂಕಿತರಲ್ಲಿ ಸೇರಿದ್ದಾರೆ. ಅಲ್ಲದೇ ಬೇರೆ ಜಿಲ್ಲೆಯಿಂದ ಚಿಕಿತ್ಸೆಗೆಂದು ಬಂದ ಒಬ್ಬನಲ್ಲೂ ಸೋಂಕು ಪತ್ತೆಯಾಗಿದೆ.
ಪಾಸಿಟಿವ್ ಬಂದ 156 ಮಂದಿಯಲ್ಲಿ 122 ಮಂದಿ ಪುರುಷರಾದರೆ, 34 ಮಂದಿ ಮಹಿಳೆಯರು. ಜಿಲ್ಲೆಯಲ್ಲಿ ಒಟ್ಟು 2710 ಮಂದಿಯನ್ನು ಆರ್‌ಟಿಪಿಸಿಆರ್ ಪರೀಕ್ಷೆಗೊಳಪಡಿಸಲಾಗಿದ್ದು, ಇವರಲ್ಲಿ 156 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಸೋಂಕು ಬಂದವರಲ್ಲಿ 151 ಮಂದಿ ಯಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದಿರುವುದರಿಂದ ಅವರನ್ನು ಹೋಮ್ ಐಸೋಲೇಷನ್‌ಗೆ ಸೇರಿಸಲಾಗಿದೆ. ಉಳಿದ ಐವರು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದರು.
ಇಂದು ಒಟ್ಟು 171 ಮಂದಿ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನ ದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 24,019 ಕ್ಕೇರಿದೆ.ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 24,946 ಆಗಿದೆ. ಜಿಲ್ಲೆಯಲ್ಲಿ ಒಟ್ಟು 737 ಮಂದಿ ಸೋಂಕಿಗೆ ಸಕ್ರಿಯ ರಾಗಿದ್ದು, ಚಿಕಿತ್ಸೆಯಲ್ಲಿದ್ದಾರೆ ಎಂದು ಡಾ.ಸೂಡ ಹೇಳಿದರು. ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,11,752 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿ ದ್ದಾರೆ. ಜಿಲ್ಲೆಯಲ್ಲಿ ಇಂದು ಸಹ ಕೋವಿಡ್‌ಗೆ ಯಾರೂ ಬಲಿಯಾಗಿಲ್ಲ. ಈವರೆಗೆ ಕೋವಿಡ್‌ನಿಂದ ಸತ್ತವರ ಸಂಖ್ಯೆ 190 ಆಗಿದೆ.
31,300ರೂ. ದಂಡ ಸಂಗ್ರಹ: ಜಿಲ್ಲೆಯಲ್ಲಿ ಶುಕ್ರವಾರ ಮಾಸ್ಕ್ ಧರಿಸದೇ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಸಾರ್ವಜನಿಕ ರಿಂದ ಒಟ್ಟು 31,300 ರೂ.ಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.