×
Ad

ಉಡುಪಿ: ಶನಿವಾರ ಲಸಿಕೆ ಸ್ವೀಕರಿಸಿದ 1398 ಮಂದಿ

Update: 2021-03-27 20:47 IST

ಉಡುಪಿ, ಮಾ. 27: ಕೊರೋನಕ್ಕೆ ಲಭ್ಯವಿರುವ ಲಸಿಕೆಯನ್ನು ಶನಿವಾರ ಒಟ್ಟು 1398 ಮಂದಿ ಸ್ವೀಕರಿಸಿದ್ದಾರೆ. ಇವರಲ್ಲಿ 1200 ಮಂದಿ ಮೊದಲ ಡೋಸ್‌ನ್ನು, 198 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ದಿನದಲ್ಲಿ 60 ಮೇಲ್ಪಟ್ಟ 803 ಮಂದಿ ಹಿರಿಯ ನಾಗರಿಕರೊಂದಿಗೆ, 45ರಿಂದ 59 ವರ್ಷದೊಳಗಿನ ಬೇರೆ ಬೇರೆ ರೋಗದಿಂದ ನರಳುವ 236 ಮಂದಿ ಈ ಲಸಿಕೆಯನ್ನು ಸ್ವೀಕರಿಸಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಒಟ್ಟು 46,649 ಮಂದಿ ಹಿರಿಯ ನಾಗರಿಕರು ಹಾಗೂ 8075 ಮಂದಿ 45-59 ವಯೋಮಾನದವರು ಲಸಿಕೆಯ ಮೊದಲ ಡೋಸ್‌ನ್ನು ಪಡೆದುಕೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಒಟ್ಟು 23,889 ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಇಂದು 137 ಮಂದಿ ಮೊದಲ ಡೋಸ್‌ನ್ನು (ಒಟ್ಟು 21,435) ಪಡೆದರೆ, 102 ಮಂದಿ ಎರಡನೇ ಡೋಸ್‌ನ್ನು (15,721)ಸ್ವೀಕರಿಸಿದ್ದಾರೆ.

ಎರಡನೇ ಹಂತದಲ್ಲಿ ಲಸಿಕೆ ಪಡೆಯುತ್ತಿರುವ ಜಿಲ್ಲೆಯ ಒಟ್ಟು 4283 ಮಂದಿ ಮುಂಚೂಣಿ ಕಾರ್ಯಕರ್ತರ ಪೈಕಿ ಇಂದು 24 ಮಂದಿ ಮೊದಲ ಡೋಸ್ ಪಡೆದಿದ್ದು, ಒಟ್ಟಾರೆಯಾಗಿ ಇವರ ಸಂಖ್ಯೆ 3853 ಆಗಿದೆ. ಅಲ್ಲದೇ 96 ಮಂದಿ ಎರಡನೇ ಡೋಸ್ ಪಡೆದಿದ್ದು ಇವರ ಒಟ್ಟು ಸಂಖ್ಯೆ 2058 ಆಗಿದೆ. ಜಿಲ್ಲೆಯಲ್ಲಿ ಇದುವರೆಗೆ 80,012 ಮಂದಿ ಲಸಿಕೆಯ ಮೊದಲ ಡೋಸ್‌ನ್ನೂ, 17,779 ಮಂದಿ ಎರಡನೇ ಡೋಸ್‌ನ್ನು ಪಡೆದಿ ದ್ದಾರೆ ಎಂದು ಡಾ.ಸೂಡ ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News