ಡಿಕೆಎಸ್ ಸಿ ಡೆವೆಲಪ್ ಮೆಂಟ್ ಸಮಿತಿ ಉದ್ಘಾಟನೆ
ಉಳ್ಳಾಲ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ. ಕೆ. ಎಸ್. ಸಿ.) ಡೆವಲಪ್ಮೆಂಟ್ ಕಮಿಟಿ ಮಂಗಳೂರು ಇದರ ಅಧೀನದಲ್ಲಿ ದೇರಳಕಟ್ಟೆಯಲ್ಲಿ ಆರಂಭಗೊಂಡ ಡಿ ಕೆ. ಎಸ್. ಸಿ. ಡೆವಲಪ್ಮೆಂಟ್ ಕಮಿಟಿ ಶಾಖೆಯ ಉದ್ಘಾಟನೆ ಯನ್ನು ಸೆಯ್ಯದ್ ಕೆಎಸ್ ಆಟಕೋಯ ತಂಙಳ್ ಕುಂಬೋಳ್ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಅಸ್ಸಯ್ಯಿದ್ ಕೆ ಎಸ್ ಅಹ್ಮದ್ ಮುಕ್ತಾರ್ ತಂಙಳ್ ಕುಂಬೋಳ್ ವಹಿಸಿದ್ದರು. ಹಾಫಿಳ್ ಮುಅವ್ವಿಝ್ ಅಹ್ಮದ್ ನವವಿ ಕಿರಾಅತ್ ಪಠಿಸಿದರು. ಸಿದ್ದೀಕ್ ಅಹ್ಮದ್ ದೇರಳಕಟ್ಟೆ ಸ್ವಾಗತಿಸಿದರು.
ಡಿಕೆಎಸ್ ಸಿ ಕೇಂದ್ರ ದ ಮಾಜಿ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಹಾಜಿ ಕಿನ್ಯಾ ಡಿ. ಕೆ. ಎಸ್. ಸಿ. ಕಿರು ಪರಿಚಯವನ್ನು ಮಾಡಿದರು.
ವ್ಯವಸ್ಥಾಪಕರು ಮರ್ಕಝ್ ತಹ್ಲೀಮುಲ್ ಇಹ್ಸಾನ್ ಮೂಳೂರು ಇದರ ವ್ಯವಸ್ಥಾಪಕ ಮುಸ್ತಫಾ ಸಅದಿ ದುವಾ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಸೈನ್ ಹಾಜಿ ಕಿನ್ಯಾ ಸಮಿತಿ ರಚನೆ ಮಾಡಿದರು.
ಕಾರ್ಯಕ್ರಮದಲ್ಲಿ ಹಂಝ ಮದನಿ ಮಿತ್ತೂರು, ಬೆಳ್ಮ ಗ್ರಾ.ಪಂ.ಅಧ್ಯಕ್ಷ . ಎಂ. ಸತ್ತಾರ್, ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ಹಾಜಿ, ಅಬೂಸಾಲಿ ಹಾಜಿ ಕಿನ್ಯ, ಹೈದರ್ ಪರ್ತಿಪ್ಪಾಡಿ, ಬಶೀರ್ ಕಾಪಿಕಾಡ್,ಸಯ್ಯದ್ ಅಲಿ, ಅಬ್ಬಾಸ್ ಉಚ್ಚಿಲ, ಅಬ್ದುಲ್ ಮಜೀದ್ ಕನ್ನಂಗಾರ್, ಎನ್ ಎಸ್ ಅಬ್ದುಲ್ಲಾ, ಈ.ಕೆ.ಇಬ್ರಾಹಿಂ ಕಿನ್ಯ, ಎಂ.ಎಂ.ಕುಂಞಿ ಮೊಂಟೆಪದವು, ಶರೀಫ್ ಬಜ್ಪೆ, ಇಬ್ರಾಹಿಂ ಬಬ್ಬುಕಟ್ಟೆ ಅಶ್ರಫ್, ಇಲ್ಯಾಸ್ ಮೊದಲಾದವರು ಉಪಸ್ಥಿತರಿದ್ದರು.
ಶಂಶುದ್ದೀನ್ ಕಾರ್ಯಕ್ರಮ ನಿರೂಪಿಸಿದರು. ಅಬ್ಬಾಸ್ ಹಾಜಿ ಎಲಿಮಲೆ ವಂದಿಸಿದರು.