ಕಾರ್ಮಿಕ ಇಲಾಖೆಯ ಸಾಲಿಸಿಟರ್ ಹುದ್ದೆಗೆ ಸೀಮಾ ನಂದ ನೇಮಕ
Update: 2021-03-27 23:33 IST
ವಾಶಿಂಗ್ಟನ್, ಮಾ. 27: ಭಾರತೀಯ ಅಮೆರಿಕನ್ ನಾಗರಿಕ ಹಕ್ಕುಗಳ ವಕೀಲೆ ಹಾಗೂ ಕಾರ್ಮಿಕರ ಹಕ್ಕುಗಳ ಹೋರಾಟಗಾರ್ತಿ ಸೀಮಾ ನಂದರನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಕಾರ್ಮಿಕ ಇಲಾಖೆಯ ಸಾಲಿಸಿಟರ್ ಹುದ್ದೆಗೆ ನೇಮಕ ಮಾಡಿದ್ದಾರೆ ಎಂದು ಶ್ವೇತಭವನ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸೀಮಾ ನಂದ ಹಿಂದಿನ ಒಬಾಮ ಆಡಳಿತದಲ್ಲಿ ಕಾರ್ಮಿಕ ಇಲಾಖೆಯ ಸಿಬ್ಬಂದಿ ಮುಖ್ಯಸ್ಥೆ, ಉಪ ಸಿಬ್ಬಂದಿ ಮುಖ್ಯಸ್ಥೆ ಮತ್ತು ಉಪ ಸಾಲಿಸಿಟರ್ ಆಗಿ ಕಾರ್ಯನಿರ್ವಹಿಸಿದ್ದರು.