ಏಕದಿನ ಕ್ರಿಕೆಟ್: ಜೊತೆಯಾಟದಲ್ಲಿ 5,000 ರನ್ ಪೂರೈಸಿದ ರೋಹಿತ್-ಶಿಖರ್ ಧವನ್

Update: 2021-03-28 11:50 GMT

ಪುಣೆ: ಭಾರತದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಏಕದಿನ ಕ್ರಿಕೆಟ್ ನಲ್ಲಿ 5,000 ರನ್ ಜೊತೆಯಾಟ ನಡೆಸಿದರು. ಈ ಸಾಧನೆ ಮಾಡಿದ ಭಾರತದ ಎರಡನೇ ಜೋಡಿ ಎಂಬ ಹಿರಿಮೆಗೆ ಪಾತ್ರರಾದರು.

ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ರೋಹಿತ್ ಹಾಗೂ ಧವನ್ ಈ ಮೈಲುಗಲ್ಲು ತಲುಪಿದ ಸಾಧನೆ ಮಾಡಿದರು. ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗುಲಿ ಈ ಮೈಲುಗಲ್ಲು ತಲುಪಿರುವ ಭಾರತದ ಮೊದಲ ಜೋಡಿಯಾಗಿದ್ದಾರೆ.

ರೋಹಿತ್ ಹಾಗೂ ಧವನ್ ಏಕದಿನ ಕ್ರಿಕೆಟ್ ನಲ್ಲಿ 5,000 ರನ್ ಪೂರೈಸಿದ್ದಾರೆ. ಸಚಿನ್-ಸೌರವ್ ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೇ ಜೋಡಿ ಇವರಾಗಿದ್ದಾರೆ ಎಂದು ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಟ್ವೀಟಿಸಿದೆ.

 ಸರಣಿ ನಿರ್ಣಾಯಕ 3ನೇ ಪಂದ್ಯದಲ್ಲಿ ಕೇವಲ 14 ಓವರ್ ಗಳಲ್ಲಿ 100 ರನ್ ಜೊತೆಯಾಟ ನಡೆಸಿದ ರೋಹಿತ್ ಹಾಗೂ ಧವನ್ ಭಾರತಕ್ಕೆ ಉತ್ತಮ ಆರಂಭ ಒದಗಿಸಿದರು. ಈ ವೇಳೆ ಧವನ್ ಅರ್ಧಶತಕವನ್ನು ಪೂರೈಸಿದರು.

15ನೇ ಓವರ್ ನಲ್ಲಿ ರೋಹಿತ್(38)ವಿಕೆಟ್ ಉರುಳಿಸಿದ ಆದಿಲ್ ರಶೀದ್ ಈ ಜೋಡಿಯನ್ನು ಬೇರ್ಪಡಿಸಿದರು. ಭಾರತವು 15ನೇ ಓವರ್ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News