×
Ad

ಉಡುಪಿ ಜಿಲ್ಲೆಯಲ್ಲಿ 115 ಮಂದಿಗೆ ಕೊರೋನ ಪಾಸಿಟಿವ್

Update: 2021-03-28 20:02 IST

ಉಡುಪಿ, ಮಾ.28: ರವಿವಾರ ಜಿಲ್ಲೆಯಲ್ಲಿ 115 ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದು, ಬೆಂಗಳೂರು ನಗರ (2004) ಹಾಗೂ ಕಲಬುರಗಿ (159) ಜಿಲ್ಲೆಗಳ ಬಳಿಕ ಉಡುಪಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಅಲ್ಲದೇ ಫೆ.25ರ ಬಳಿಕ ಕೋವಿಡ್‌ಗೆ ಜಿಲ್ಲೆಯಲ್ಲಿ ಮೊದಲ (ಒಟ್ಟು 191) ಬಲಿಯೂ ಇಂದು ವರದಿಯಾಗಿದೆ.

ಇಂದು ಪಾಸಿಟಿವ್ ಬಂದ 115 ಮಂದಿಯಲ್ಲಿ 70 ಮಂದಿ ಎಂಐಟಿಯ ವಿದ್ಯಾರ್ಥಿಗಳೇ ಇದ್ದಾರೆ. ಇದರೊಂದಿಗೆ ಕಂಟೈನ್‌ಮೆಂಟ್ ವಲಯವಾಗಿ ರುವ ಎಂಐಟಿ ಕ್ಯಾಂಪಸ್‌ನಲ್ಲಿ ಮಾ.11ರ ಬಳಿಕ ಕೋವಿಡ್‌ಗೆ ಪಾಸಿಟಿವ್ ಬರುತ್ತಿರುವವರ ಸಂಖ್ಯೆ 966ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ‌ಚಂದ್ರ ಸೂಡ ತಿಳಿಸಿದ್ದಾರೆ.

ಕಾರ್ಕಳದ 69ರ ಹರೆಯದ ಹಿರಿಯ ನಾಗರಿಕರೊಬ್ಬರು ಕೋವಿಡ್‌ನಿಂದ ಮಾ.26ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮಾ.24ರಂದು ತೀವ್ರವಾದ ಕೋವಿಡ್, ಉಸಿರಾಟದ ತೊಂದರೆ, ಕೆಮ್ಮುವಿಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಈ ವೃದ್ಧರು, ಚಿಕಿತ್ಸೆಯಿಂದ ಚೇತರಿಸಿಕೊಳ್ಳದೇ 26ರಂದು ಮೃತಪಟ್ಟರು. ಇದಕ್ಕೆ ಮೊದಲು ಫೆ.25ರಂದು ಪರ್ಕಳದ 67ರ ಹರೆಯದ ವೃದ್ಧರು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ದಿನದಲ್ಲಿ 27 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಚಿಕಿತ್ಸೆ ಯಲ್ಲಿರುವವರ ಸಂಖ್ಯೆ ಈಗ 824ಕ್ಕೆ ನೆಗೆದಿದೆ. ರವಿವಾರ ಪಾಸಿಟಿವ್ ಬಂದವರಲ್ಲಿ 72 ಮಂದಿ ಪುರುಷರು ಹಾಗೂ 43 ಮಂದಿ ಮಹಿಳೆಯರು. ಇವರಲ್ಲಿ 84 ಮಂದಿ ಉಡುಪಿ ತಾಲೂಕಿನವರಾದರೆ 24 ಮಂದಿ ಕುಂದಾಪುರ ತಾಲೂಕಿನವರು ಹಾಗೂ ಏಳು ಮಂದಿ ಕಾರ್ಕಳ ತಾಲೂಕಿನವರಾಗಿದ್ದಾರೆ. ಇವರಲ್ಲಿ 113 ಮಂದಿ ಹೋಮ್ ಐಸೋಲೇಷನ್ ‌ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

ಶನಿವಾರ 27 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 24,046 ಕ್ಕೇರಿದೆ. ಶನಿವಾರ ಜಿಲ್ಲೆಯ 2430 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 115 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 25,061 ಆಗಿದೆ ಎಂದು ಡಾ.ಸೂಡ ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,14,182 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಇಂದು ಒಬ್ಬರು ಮೃತಪಡುವುದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ನಿಂದ ಸತ್ತವರ ಸಂಖ್ಯೆ 191 ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News