ಕಪಿತಾನಿಯೋ ಶಾಲೆಯಲ್ಲಿ ಕಣ್ಣಿನ ತಪಾಸಣಾ ಶಿಬಿರ
Update: 2021-03-28 20:15 IST
ಮಂಗಳೂರು, ಮಾ.28: ಹ್ಯೂಮ್ಯಾನಿಟಿ ಫಸ್ಟ್ ಫೌಂಡೇಶನ್ ಸಂಸ್ಥೆಯು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಸಹಕಾರದಲ್ಲಿ ರವಿವಾರ ನಗರದ ಕಪಿತಾನಿಯೋ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಿತು.
ಆಸ್ಪತ್ರೆಯ ಪರವಾಗಿ ಡಾ.ಆಶೀಶ್, ಹ್ಯೂಮ್ಯಾನಿಟಿ ಫಸ್ಟ್ ಫೌಂಡೇಶನ್ ಮಂಗಳೂರು ಘಟಕದ ಅಧ್ಯಕ್ಷ ರಾಜೇಶ್ ಮಿಸ್ಕಿತ್, ಉಪಾಧ್ಯಕ್ಷ ಪ್ರೇಮ್ ಡಿಸೋಜ, ಕಪಿತಾನಿಯೋ ಕಾನ್ವೆಂಟ್ ಮತ್ತು ಇನ್‌ಸ್ಟಿಟ್ಯೂಶನ್‌ನ ಸುಪೀರಿಯರ್ ಸಿಸ್ಟರ್ ಸೆಲಿನ್ ಜೇನ್ ಮೆಂಡೋನ್ಸಾ, ಸಮಾಜ ಸೇವಕ ಪೀಟರ್ ಫೆನಾರ್ಂಡಿಸ್, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯಶಿಕ್ಷಕಿ ಭಗಿನಿ ಶಾಲಿನಿ ಶಿಬಿರವನ್ನು ಉದ್ಗಾಟಿಸಿದರು.
ಹ್ಯೂಮ್ಯಾನಿಟಿ ಫಸ್ಟ್ ಫೌಂಡೇಶನ್‌ನ ಸದಸ್ಯ ಮ್ಯಾಕ್ಸಿಮ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.