ಡಾ. ಮಿಥುನ್ ಚಕ್ರವರ್ತಿಯ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ
Update: 2021-03-28 20:28 IST
ಮಂಗಳೂರು, ಮಾ.28: ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ (ಇಂಟಾಚ್) ನ ಮಂಗಳೂರು ಅಧ್ಯಾಯ ಆರ್ಟ್ ಕೆನರಾ ಟ್ರಸ್ಟ್ ಸಹಯೋಗದೊಂದಿಗೆ ಹಿಂದೂಸ್ತಾನಿ ಕಲಾವಿದ ಡಾ. ಮಿಥುನ್ ಚಕ್ರವರ್ತಿಯ ಶಾಸ್ತ್ರೀಯ ಗಾಯನ ಕಾರ್ಯಕ್ರಮವು ಶನಿವಾರ ನಗರದ ಬಲ್ಲಾಳ್‌ಭಾಗ್‌ನ ಕೊಡಿಯಲ್ ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ನಡೆಯಿತು.
ಡಾ. ಮಿಥುನ್ ಚಕ್ರವರ್ತಿ ಅವರೊಂದಿಗೆ ಸಹಕಲಾವಿದರಾಗಿ ಹಾರ್ಮೋನಿಯಂನಲ್ಲಿ ಶ್ರೀಧರ್ ಭಟ್, ತಬ್ಲಾದಲ್ಲಿ ಭರವಿ ದೇರಾಜೆ ಮತ್ತು ತನ್ಪುರಾದಲ್ಲಿ ಸತೀಶ್ ಕಾಮತ್ ಸಹಕರಿಸಿದರು.
ಇಂಟಾಚ್ ಮಂಗಳೂರು ಅಧ್ಯಾಯದ ಸಂಚಾಲಕ ಸುಭಾಷ್ ಬಸು ಮತ್ತು ಸಿಂಧುಶ್ರೀ ಕಲಾವಿದರನ್ನು ಪರಿಚಯಿಸಿದರು. ಈ ಸಂದರ್ಭ ಆರ್ಟ್ ಕೆನರಾ ಟ್ರಸ್ಟ್‌ನ ಟ್ರಸ್ಟಿಗಳಾದ ರಾಜೇಂದ್ರ ಕೇದಿಗೆ ಮತ್ತು ನೇಮಿರಾಜ್ ಶೆಟ್ಟಿ ಉಪಸ್ಥಿತರಿದ್ದರು.
..