ಪದವಿ ಪರೀಕ್ಷೆ: ಸತ್ಯ ಸುಬ್ರಹ್ಮಣ್ಯಗೆ ನಾಲ್ಕನೆ ರ್ಯಾಂಕ್
Update: 2021-03-28 20:40 IST
ಶಿರ್ವ, ಮಾ.28: ಶಿರ್ವ ಸಂತ ಮೇರಿ ಕಾಲೇಜಿನ ವಿದ್ಯಾರ್ಥಿ ಸತ್ಯ ಸುಬ್ರಹ್ಮಣ್ಯ ವಿ.ಎಸ್. ಮಂಗಳೂರು ವಿಶ್ವವಿದ್ಯಾನಿಲಯ 2020ರ ಸೆಪ್ಟಂಬರ್ ನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಗಣಕ ವಿಜ್ಞಾನ ವಿಭಾಗ ಬಿಸಿಎಯಲ್ಲಿ ಶೇ.95.72 ಅಂಕಗಳೊಂದಿಗೆ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ.
ಇವರು ಕಾಸರಗೋಡಿನ ವೆಂಕಟೇಶ್ವರ ಭಟ್ ಮತ್ತು ಗೌರಿ ದಂಪತಿ ಪುತ್ರ.