ಪಿ.ಭಾಸ್ಕರ್ ತಂತ್ರಿಗೆ ಸೇವಾಭೂಷಣ ಪ್ರಶಸ್ತಿ
Update: 2021-03-28 20:42 IST
ಉಡುಪಿ, ಮಾ.28: ಯಕ್ಷಗಾನ ಕಲಾರಂಗದಲ್ಲಿ 27ವರ್ಷಗಳ ಕಾಲ ಕೋಶಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಎಸ್.ಗೋಪಾಲಕೃಷ್ಣರ ಸ್ಮರಣೆಯಲ್ಲಿ ನೀಡುವ ಸೇವಾ ಭೂಷಣ ಪ್ರಶಸ್ತಿಗೆ ಈ ಬಾರಿ ಸಿಂಡಿಕೇಟ್ ಬ್ಯಾಂಕ್ನ ನಿವೃತ್ತ ಅಧಿಕಾರಿ ಪಿ.ಭಾಸ್ಕರ್ ತಂತ್ರಿ ಅವರನ್ನು ಆಯ್ಕೆ ಮಾಡಲಾಗಿದೆ.
ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾ.30ರಂದು ಸಂಜೆ 6ಗಂಟೆಗೆ ಸಂಸ್ಥೆಯ ಕಚೇರಿಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಿರು ವರು ಎಂದು ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.