ಸಂತೆಕಟ್ಟೆ ಪ್ರೌಢಶಾಲೆಗೆ ವಿವಿಧ ಕೊಡುಗೆ ಹಸ್ತಾಂತರ

Update: 2021-03-28 15:51 GMT

 ಬ್ರಹ್ಮಾವರ, ಮಾ.28: ಇಂದು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ದಾನಿಗಳ ಸಹಕಾರದಿಂದ ಇತರೆ ಸೌಲಭ್ಯಗಳೂ ದೊರೆತು ಖಾಸಗಿ ಶಾಲೆಗಳಿಗೆ ಸರಿಸಮಾನವಾಗಿ ಉನ್ನತಿಗೊಳ್ಳುತ್ತಿರುವುದು ಸಂತೋಷದ ವಿಷಯ ಎಂದು ಉಡುಪಿಯ ಸಾಫಲ್ಯ ಟ್ರಸ್ಟ್‌ನ ಅಧ್ಯಕ್ಷೆ ನಿರುಪಮಾ ಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಬ್ರಹ್ಮಾವರ ವಲಯ ಕಳ್ತೂರು ಸಂತೆಕಟ್ಟೆಯ ಆರ್ಬೆಟ್ಟು ವಾಮನ ಕಾಮತ್ ಫೌಂಡೇಶನ್ ಸಂತೆಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ದಾನಿಗಳಿಂದ ನೀಡಲಾದ ವಿವಿಧ ಸವಲತ್ತುಗಳನ್ನು ಶಾಲೆಗೆ ಹಸ್ತಾಂತರಿಸಿ ಅವರು ಮಾತನಾಡುತಿದ್ದರು.

ಬ್ರಹ್ಮಾವರ ವಲಯ ಕಳ್ತೂರು ಸಂತೆಕಟ್ಟೆಯ ಆರ್ಬೆಟ್ಟು ವಾಮನ ಕಾಮತ್ ಫೌಂಡೇಶನ್ ಸಂತೆಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಸಮಾರಂದಲ್ಲಿದಾನಿಗಳಿಂದನೀಡಲಾದವಿವಿ ಸವಲತ್ತುಗಳನ್ನು ಶಾಲೆಗೆ ಹಸ್ತಾಂತರಿಸಿ ಅವರು ಮಾತನಾಡುತಿದ್ದರು. ಇದೇ ಸಂದರ್ಭ ಉಡುಪಿಯ ಸಾಫಲ್ಯ ಟ್ರಸ್ಟ್ ವತಿಯಿಂದ ಶಾಲೆಗೆ ಕಂಪ್ಯೂಟರ್, ಇಂಗ್ಲೀಷ್ ಕಲಿಕೆಗೆ ಸಹಾಯಕವಾಗುವ ಡಾ.ಜನಾರ್ಧನ ಭಟ್ ಬರೆದಿರುವ ಕನ್ನಡದ ಮೂಲಕ ಇಂಗ್ಲೀಷ್ ಎಂಬ ಪುಸ್ತಕ, ಹೆಬ್ರಿಯ ಉದ್ಯಮಿ ನೀನಾ ಬಲ್ಲಾಳ್ ಹಾಗೂ ಕೊಡಂಕೂರಿನ ದಿವಾಕರ ಶೆಟ್ಟಿ ತೋಟದಮನೆ ಶಾಲೆಗೆ ವಿವಿಧ ವಸ್ತುಗಳನ್ನು ಕೊಡುಗೆಯಾಗಿ ನೀಡಿದರು.

ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಉಪಾಧ್ಯಕ್ಷ ಆರ್ಬೆಟ್ಟು ರಮಾಕಾಂತ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. 38ನೇ ಕಳ್ತೂರು ಗ್ರಾಪಂ ಅಧ್ಯಕ್ಷೆ ಸುಕನ್ಯ ಶೆಟ್ಟಿ, ಸಾಫಲ್ಯ ಟ್ರಸ್ಟ್‌ನ ಸದಸ್ಯೆ ಹಾಗೂ ನಿವೃತ್ತ ಪ್ರಾಂಶುಪಾಲೆ ಶಾಂಭವಿ, ಟ್ರಸ್ಟ್‌ನ ಸದಸ್ಯರಾದ ಮಮತಾ ದಿವಾಕರ್ ಶೆಟ್ಟಿ, ಪ್ರಜ್ಞಾ ಶೆಟ್ಟಿ ಉಪಸ್ಥಿತರಿದ್ದರು.

ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ಉಪ್ಯಾಕ್ಷಆರ್ಬೆಟ್ಟುರಮಾಕಾಂತ್‌ಕಾಮತ್‌ಅ್ಯಕ್ಷತೆ ವಹಿಸಿದ್ದರು. 38ನೇ ಕಳ್ತೂರು ಗ್ರಾಪಂ ಅ್ಯಕ್ಷೆಸುಕನ್ಯಶೆಟ್ಟಿ,ಸಾಫಲ್ಯಟ್ರಸ್ಟ್‌ನಸದಸ್ಯೆಹಾಗೂನಿವೃತ್ತಪ್ರಾಂಶುಪಾಲೆಶಾಂವಿ, ಟ್ರಸ್ಟ್‌ನ ಸದಸ್ಯರಾದ ಮಮತಾ ದಿವಾಕರ್ ಶೆಟ್ಟಿ, ಪ್ರಜ್ಞಾ ಶೆಟ್ಟಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಕವಿತಾ ಸ್ವಾಗತಿಸಿದರು. ಸಹಶಿಕ್ಷಕಿ ಚಿತ್ರಕಲಾ ವಂದಿಸಿದರು. ಸಹಶಿಕ್ಷಕ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News