"ಕೊರೋನಾವೈರಸ್ ಲ್ಯಾಬ್‍ನಿಂದ ಸೋರಿಕೆಯಾಗಿರುವ ಸಾಧ್ಯತೆ ಕಡಿಮೆ, ಬಾವಲಿಗಳು ಕಾರಣವಾಗಿರಬಹುದು"

Update: 2021-03-29 07:27 GMT

ಜಿನೀವಾ: ಕೊರೋನಾವೈರಸ್ ಸೋಂಕು ಬಾವಲಿಗಳಿಂದ ಬೇರೊಂದು ಪ್ರಾಣಿಯ ಮೂಲಕ ಮನುಷ್ಯರಿಗೆ ಹರಡಿರುವ ಸಾಧ್ಯತೆಯಿದೆ ಹಾಗೂ ಪ್ರಯೋಗಾಲಯದಿಂದ ಈ ವೈರಾಣು ಸೋರಿಕೆ ಸಾಧ್ಯತೆ ಬಹಳಷ್ಟು ಕಡಿಮೆ ಎಂದು ಕೋವಿಡ್-19 ವೈರಾಣು ಹೇಗೆ ಹುಟ್ಟಿಕೊಂಡಿತು ಎಂಬುದನ್ನು ತಿಳಿಯಲು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಚೀನಾ  ಜಂಟಿಯಾಗಿ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಈ ಅಧ್ಯಯನದ ಫಲಿತಾಂಶ ನಿರೀಕ್ಷೆಯಂತೆಯೇ ಇದ್ದರೂ ಹಲವು ಪ್ರಶ್ನೆಗಳಿಗೆ ಅದು ಉತ್ತರ ನೀಡಿಲ್ಲ. ಪ್ರಯೋಗಾಲಯದಿಂದ ವೈರಾಣು ಸೋರಿಕೆಯಾಗಿರುವ ಸಾಧ್ಯತೆಯನ್ನು ಹೊರತುಪಡಿಸಿ ಬೇರೆ ಎಲ್ಲಾ  ಕೋನದಿಂದಲೂ ಹೆಚ್ಚಿನ ಸಂಶೋಧನೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ನಿರ್ಧರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News