ಕೊರೋನ ವೈರಸ್‌ ತಡೆಯುವಲ್ಲಿ ಮೋಡೆರ್ನಾ ಮತ್ತು ಫೈಝರ್‌-ಬಯೋಟೆಕ್‌ ಲಸಿಕೆಗಳು ಪರಿಣಾಮಕಾರಿ: ಅಧ್ಯಯನ ವರದಿ‌

Update: 2021-03-29 17:33 GMT

ನ್ಯೂಯಾರ್ಕ್: ಮೋಡೆರ್ನಾ ಮತ್ತು ಫೈಝರ್-ಬಯೋಟೆಕ್ ತಯಾರಿಸಿದ ಕೊರೋನ ವೈರಸ್ ಲಸಿಕೆಗಳು ಸದ್ಯದ ಪರಿಸ್ಥಿತಿಯಲ್ಲಿ ರೋಗಲಕ್ಷಣ ಮತ್ತು ಲಕ್ಷಣರಹಿತ ಸೋಂಕುಗಳನ್ನು ತಡೆಗಟ್ಟುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಸಾಬೀತಾಗಿರುವ ಕುರಿತು ಫೆಡರಲ್ ಆರೋಗ್ಯ ಸಂಶೋಧಕರು ಸೋಮವಾರ ವರದಿ ಮಾಡಿದ್ದಾರೆ.

ಕ್ಲಿನಿಕಲ್ ಟ್ರಯಲ್ ಡೇಟಾಗೆ ಅನುಗುಣವಾಗಿ ಎರಡನೇ ಡೋಸ್ ನೀಡಿದ ಎರಡು ವಾರಗಳ ನಂತರ 90 ಪ್ರತಿಶತದಷ್ಟು ಸೋಂಕುಗಳನ್ನು ತಡೆಯುತ್ತದೆ. ವ್ಯಾಕ್ಸಿನೇಷನ್ ಮಾಡಿದ ಎರಡು ವಾರಗಳ ನಂತರ ಒಂದು ಡೋಸ್ 80 ಪ್ರತಿಶತ ಸೋಂಕನ್ನು ತಡೆಯುತ್ತದೆ ಎಂದು ವರದಿ ತಿಳಿಸಿದೆ.

ಲಸಿಕೆ ಹಾಕಿದ ಜನರು ಕೋವಿಡ್‌ ಲಸಿಕೆ ಪಡೆದುಕೊಂಡ ಬಳಿಕ ರೋಗಲಕ್ಷಣವಿಲ್ಲದ ಸೋಂಕು ಭಾಧಿತರಾಗುತ್ತಾರೆಯೇ? ಮತ್ತು ವೈರಸ್ ಇತರರಿಗೆ ಹರಡಬಹುದೇ ಎಂಬ ಬಗ್ಗೆ ಚರ್ಚೆಗಳು ನಡೆದಿವೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಸಂಶೋಧಕರು ನಡೆಸಿದ ಅಧ್ಯಯನವು, ಸೋಂಕುಗಳು ತುಂಬಾ ವಿರಳವಾಗಿರುವುದರಿಂದ, ಹರಡುವಿಕೆಯು ವಿರಳವಾಗಿದೆ ಎಂದು ಸೂಚಿಸಿದೆ.

ರೂಪಾಂತರಗೊಂಡ ವೈರಸ್ ಲಸಿಕೆಗಳನ್ನು ಕಡಿಮೆ ಪರಿಣಾಮಕಾರಿಯಾಗಿ ನೀಡುತ್ತವೆ ಎಂಬ ಕಳವಳವೂ ಇದೆ. ಅಧ್ಯಯನದ ಫಲಿತಾಂಶಗಳು ಈ ಕುರಿತಾಗಿರುವ ಭಯವನ್ನು ಖಚಿತಪಡಿಸುವುದಿಲ್ಲ ಎಂದು ವರದಿ ತಿಳಿಸಿದೆ. ಅಧ್ಯಯನದ ಸಮಯದಲ್ಲಿ ರೂಪಾಂತರ ವೈರಸ್‌ ಗಳು ಹರಡುತ್ತಿದ್ದು, ಡಿಸೆಂಬರ್ 14, 2020 ರಿಂದ ಮಾರ್ಚ್ 13, 2021 ರವರೆಗೆ ಈ ಲಸಿಕೆಗಳು ಇನ್ನೂ ಪ್ರಬಲವಾದ ರಕ್ಷಣೆಯನ್ನು ಒದಗಿಸಿವೆ ಎಂದು ವರದಿ ತಿಳಿಸಿದೆ.

ಕೊರೋನ ವೈರಸ್‌ ಗೆ ತುತ್ತಾಗುವ ಅಪಾಯದಲ್ಲಿರುವ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಸೇರಿದಂತೆ 3,950 ಮಂದಿಯನ್ನು ಸಿ.ಡಿ.ಸಿಯು ಪಟ್ಟಿ ಮಾಡಿತ್ತು. ಆದರೆ, ಅವರು ಈ ಹಿಂದೆ ಯಾವುದೇ ಸೋಂಕಿಗೆ ಒಳಗಾಗಿರಲಿಲ್ಲ ಎಂದು ವರದಿ ತಿಳಿಸಿದೆ.

ಮೊದಲ ಡೋಸ್‌ ಪಡೆದುಕೊಂಡ 1000 ಮಂದಿಯಲ್ಲಿ ದಿನಕ್ಕೆ 0.19ರಷ್ಟು ಸೋಂಕುಗಳು ಕಂಡು ಬಂದರೆ, ಇದುವರೆಗೂ ವ್ಯಾಕ್ಸಿನ್‌ ಪಡೆಯದವರಲ್ಲಿ 1.38 ಸೋಂಕುಗಳು ಕಂಡು ಬಂದಿವೆ ಎಂದು ಅಧ್ಯಯನ ತಿಳಿಸಿದೆ. "ರಾಷ್ಟ್ರೀಯ ಲಸಿಕಾ ಪ್ರಯತ್ನಗಳು ಫಲ ನೀಡುತ್ತಿವೆ ಎನ್ನುವುದನ್ನು ಇದು ತೋರಿಸುತ್ತದೆ" ಎಂದು ಡಾ. ರೋಚೆಲ್‌ ಪಿ. ವಾಲೆನ್ಸ್ಕಿ ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News