ಭಾರೀ ಗಾಳಿ, ಮಳೆ: ಲಂಗರು ಹಾಕಿದ ಬೋಟುಗಳಿಗೆ ಹಾನಿ
Update: 2021-03-30 10:11 IST
ಮಂಗಳೂರು : ನಿನ್ನೆ ಸುರಿದ ಧಾರಕಾರ ಗಾಳಿ, ಮಳೆಗೆ ಮಂಗಳೂರು ಹಳೆ ಬಂದರು ಧಕ್ಕೆಯಲ್ಲಿ ಲಂಗರು ಹಾಕಿದ್ದ ಬೋಟುಗಳ ಹಗ್ಗ ತುಂಡಾಗಿ ಒಂದಕ್ಕೊಂದು ಢಿಕ್ಕಿಯಾಗಿ ಅಪಾರ ಹಾನಿಯಾಗಿದೆ.
ಭಾರೀ ಗಾಳಿಗೆ ಹಲವು ಬೋಟುಗಳು ಪಣಂಬೂರು, ಮಿನಕಳಿಯ, ಚಿತ್ರಾಪುರ, ಸುರತ್ಕಲ್, ಸಸಿಹಿತ್ಲು ಸಮುದ್ರ ಕಿನಾರೆಯತ್ತ ಸಾಗಿದೆ. ಲಂಗರು ಹಾಕಿದ ಬೋಟುಗಳಿಗೆ ಹಾನಿಯಾದ ಪರಿಣಾಮ ಮೀನುಗಾರರು ಸಂಕಷ್ಟ ಎದುರಿಸುವಂತಾಗಿದೆ.