"ಮ್ಯಾನ್ಮಾರ್‌ ನಿರಾಶ್ರಿತರಿಗೆ ವಸತಿ, ಆಹಾರ ನೀಡುವುದಿಲ್ಲ" ಎಂಬ ಆದೇಶವನ್ನು ಹಿಂತೆಗೆದ ಮಣಿಪುರ ಗೃಹ ಇಲಾಖೆ

Update: 2021-03-30 07:00 GMT

ಹೊಸದಿಲ್ಲಿ: ಮಯನ್ಮಾರ್‌ ನಲ್ಲಿ ಸೇನಾಡಳಿತದಿಂದಾಗಿ ಹಲವಾರು ಸಾವು ನೋವುಗಳು ಸಂಭವಿಸಿದ್ದು, ಈ ವೇಳೆ ಮ್ಯಾನ್ಮಾರ್‌ ನಾಗರಿಕರು ಮಣುಪರದಿಂದಾಗಿ ಭಾರತಕ್ಕೆ ನಿರಾಶ್ರಿತರಾಗಿ ಆಗಮಿಸಿದರೆ ಅವರಿಗೆ ಊಟ, ವಸತಿ ನೀಡಬೇಡಿ ಎಂದು ಮಣಿಪುರ ಗೃಹ ಇಲಾಖೆ ಆದೇಶ ಹೊರಡಿಸಿತ್ತು. ಇದೀಗ ಈ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ಆದೇಶವನ್ನು ಹಿಂತೆಗೆದುಕೊಂಡ ಗೃಹ ಇಲಾಖೆ ನಿನ್ನೆ ಮತ್ತೆ ಅದೇ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆದಿದೆ.

"ಪತ್ರದ ವಿಷಯಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ವಿಭಿನ್ನವಾಗಿ ವ್ಯಾಖ್ಯಾನಿಸಲಾಗಿದೆ ಎಂದು ತೋರುತ್ತಿದೆ. ಈ ತಪ್ಪುಗ್ರಹಿಕೆಯನ್ನು ಸರಿಪಪಡಿಸುವ ಸಲುವಾಗಿ, ಮೇಲೆ ತಿಳಿಸಿದ 26.03.2021 ರ ಪತ್ರವನ್ನು ಹಿಂಪಡೆಯಲು ನಿರ್ಧರಿಸಿದೆ ಎಂದು ಸರ್ಕಾರದ ನಿರ್ಧಾರವನ್ನು ತಿಳಿಸಲು ನನಗೆ ನಿರ್ದೇಶಿಸಲಾಗಿದೆ,"  ಎಂದು ರಾಜ್ಯ ಸರ್ಕಾರದ ವಿಶೇಷ ಗೃಹ ಕಾರ್ಯದರ್ಶಿ ಎಚ್ ಜ್ಞಾನ ಪ್ರಕಾಶ್ ಅವರು ನಿನ್ನೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

"ಗಾಯಗೊಂಡ ಮ್ಯಾನ್ಮರೀಸ್ ಪ್ರಜೆಗಳಿಗೆ ಚಿಕಿತ್ಸೆ ನೀಡಲು ಅವರನ್ನು (ನಿರಾಶ್ರಿತರನ್ನು) ಇಂಫಾಲ್ಗೆ ಕರೆದೊಯ್ಯುವುದು ಸೇರಿದಂತೆ ಸರ್ಕಾರವು ಎಲ್ಲಾ ಮಾನವೀಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ಸಹಾಯವನ್ನು ನೀಡುತ್ತಲೇ ಇದೆ" ಎಂದು ಅವರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News