ಸುಳ್ಳು ದಾಖಲಾತಿ ಸೃಷ್ಠಿಸಿ ವಂಚನೆ: ದೂರು
ಉಡುಪಿ, ಮಾ.30: ತಾಯಿಯಿಂದ ಬಂದಿರುವ ಸ್ಥಿರಾಸ್ತಿಯನ್ನು ಅಕ್ರಮವಾಗಿ ಕಬಳಿಸುವ ಉದ್ದೇಶದಿಂದ ಸುಳ್ಳು ದಾಖಲಾತಿ ಸೃಷ್ಠಿಸಿ ವಂಚನೆ ಎಸಗಿ ಮೋಸ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ಗ್ರಾಮದ ಎಲ್‌ವಿಟಿ ದೇವಸ್ಥಾನದ ಹಿಂಬದಿ ನಿವಾಸಿ ಭಾಸ್ಕರ.ಕೆ ನಾಯಕ್ ಎಂಬವರ ತಂದೆ ಜೀವಿತಾವಧಿಯಲ್ಲಿ ವೀಲುನಾಮೆ ದಸ್ತಾವೇಜು ಬರೆದಿಟ್ಟು ಸಬ್ರಿಜಿಸ್ಟರ್ ಕಚೇರಿಯಲ್ಲಿ ನೊಂದಾವಣೆ ಮಾಡಿಸಿದ್ದರು. ವೀಲು ನಾಮೆಯಲ್ಲಿ ಸಹೋದರ ಶಂಕರ್ ನಾಯಕ್ಗೆ ಸ್ಥಿರಾಸ್ತಿಯ ಬದಲು ಹಣವನ್ನು ನೀಡಿದ್ದು ಅವರಿಗೆ ಯಾವುದೇ ಸ್ಥಿರಾಸ್ತಿಯ ಹಕ್ಕು ಇರುವುದಿಲ್ಲ ಎಂದು ಬರೆಯಲಾಗಿದೆ.
ಭಾಸ್ಕರ್ ನಾಯಕ್‌ರ ತಂದೆ ತೀರಿಕೊಂಡ ಬಳಿಕ ಸ್ಥಿರಾಸ್ತಿಗಳು ಅವರ ತಾಯಿಗೆ ಬಂದಿದ್ದು, ಅದನ್ನು ಭಾಸ್ಕರ್ ನಾಯಕ್‌ಗೆ ನೀಡದೆ ಶಂಕರ್ ನಾಯಕ್ ತನ್ನೊಬ್ಬನ ಹೆಸರಿಗೆ ನೊಂದಾವಣೆ ಮಾಡಿಕೊಂಡಿರುವುದಲ್ಲದೆ ತಂದೆಯವರು ಯಾವುದೇ ವೀಲುನಾಮೆ ವಗೈರೆ ಮಾಡಿಸಿರುವುದಿಲ್ಲ ಎಂಬುದಾಗಿ ಸುಳ್ಳು ದಸ್ತವೇಜು ನೊಂದಾಯಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.