ಸೆಕ್ಷನ್ ಬಗ್ಗೆ ಸರಿಯಾದ ಮಾಹಿತಿ ನೀಡಲು ಡಿಸಿಗೆ ಮಾಜಿ ಶಾಸಕ ಲೋಬೊ ಮನವಿ
Update: 2021-03-30 22:12 IST
ಮಂಗಳೂರು, ಮಾ.30: ದ.ಕ. ಜಿಲ್ಲಾದ್ಯಂತ ಸೆ.144(3) ಜಾರಿಗೊಳಿಸಿದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ. ವಿ. ಅವರನ್ನು ಮಂಗಳೂರು ಧರ್ಮಪ್ರಾಂತದ ಬಿಷಪರ ಪ್ರತಿನಿಧಿಗಳ ಜತೆಗೆ ಮಂಗಳವಾರ ಭೇಟಿ ಮಾಡಿದ ಮಾಜಿ ಶಾಸಕ ಜೆ.ಆರ್. ಲೋಬೊ ಮುಂದಿನ ಎಪ್ರಿಲ್‌ನಲ್ಲಿ ಗುಡ್ ಫ್ರೈಡೆ, ಈಸ್ಟರ್ ಸಹಿತ ಅನೇಕ ಹಬ್ಬಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ಇರುವುದರಿಂದ ಕೋವಿಡ್ ನಿಯಮಗಳನ್ನು ಪಾಲಿಸಿ ಧಾರ್ಮಿಕ ಕೇಂದ್ರದೊಳಗೆ ಆಚರಿಸಲು ಅನುಮತಿ ನೀಡಲು ಮನವಿ ಮಾಡಿದ್ದಾರೆ.
ಸೆ. 144(3) ಬಗ್ಗೆ ಜನರಲ್ಲಿ ತೀವ್ರ ಆತಂಕ ಉಂಟಾಗಿದೆ. ಗೊಂದಲಕ್ಕೂ ಈಡಾಗಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ, ಧಾರ್ಮಿಕ ಹಾಗೂ ಇನ್ನಿತರ ಕಾರ್ಯಕ್ರಮಗಳಿಗೆ ತೊಂದರೆ ಆಗದಂತೆ ಅವಕಾಶ ನೀಡುವಂತೆ ಮನವಿ ಸಲ್ಲಿಸಿದ್ದಾರೆ.