×
Ad

ಎ. 1 ರಿಂದ ಉದ್ಯಾವರ ಉರೂಸ್

Update: 2021-03-30 22:23 IST

ಮಂಜೇಶ್ವರ : ಮಂಜೇಶ್ವರ ತಾಲೂಕಿನ ಉದ್ಯಾವರ ಅಸ್ಸಯ್ಯದ್ ಶಹೀದ್ ವಲಿಯುಲ್ಲಾಹಿ (ರ . ಅ ) ಉರೂಸ್ ಕಾರ್ಯಕ್ರಮವು ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಎ.  1 ರಿಂದ ಏಪ್ರಿಲ್  4 ರ ತನಕ ನಡೆಯಲಿರುವುದಾಗಿ ಉರೂಸ್ ಕಮಿಟಿ ಜೊತೆ ಕಾರ್ಯದರ್ಶಿ ಎಸ್ ಎಂ ಬಶೀರ್  ದರ್ಗಾ ಶೆರೀಫ್ ನಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.

ಏಪ್ರಿಲ್ 1 ರಂದು  ರಂದು ಬೆಳಿಗ್ಗೆ 10 ಗಂಟೆಗೆ ದರ್ಗಾ ಸಮಿತಿ ಅಧ್ಯಕ್ಷರಾದ  ಎ.ಕೆ. ಮೊಹಮ್ಮದ್ ಮೋನು ಹಾಜಿ ಧ್ವಜಾರೋಹಣ ಗೈಯುವುದರೊಂದಿಗೆ ಉರೂಸ್  ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ . ಬಳಿಕ ಅದೇ ದಿನ ರಾತ್ರಿ 8.30 ಕ್ಕೆ  ಅತಾವುಲ್ಲಾ ತಂಘಳ್ ರವರ ಮಖಾಮ್ ಝಿಯಾರತಿನ ಬಳಿಕ ಜಮಾಹತ್ ಮುದರಿಸ್ ಅಬ್ದುಲ್ ಖಾದರ್ ಮದನಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಅಧ್ಯಕ್ಷ ಹಾಗೂ ಸಾವಿರ ಜಮಾಹತ್ ಖಾಝಿ ಅಸ್ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ  ತಂಙಳ್  ಉದ್ಘಾಟಿಸಲಿರುವರು.

ಎಪ್ರಿಲ್ 2 ರಂದು ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ಉಸ್ತಾದರ ನೇತ್ರತ್ವದಲ್ಲಿ ಮದನೀಯಂ ಮಜ್ಲಿಸ್ ನಡೆಯಲಿದೆ. ಸಮಾರೋಪದ ದಿನವಾದ ಏಪ್ರಿಲ್ 3 ರಂದು ಉದ್ಯಾವರ ಖತೀಬ್ ಅಬ್ದುಲ್ ಕರೀಂ ದಾರಿಮಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭವನ್ನು ಅಸ್ಸಯ್ಯದ್ ಇಬ್ರಾಹಿಂ ಖಲೀಲುಲ್ ಬುಖಾರಿ ಕಡಲುಂಡಿ ತಂಙಳ್ ಉದ್ಘಾಟಿಸಲಿರುವರು. ಬಳಿಕ ಮೌಲೂದ್ ಮಜಲಿಸ್ ಮತ್ತು ಹಗಲು ಉರೂಸ್ ಹಾಗೂ ಅನ್ನದಾನ ನಡೆಯಲಿದೆ .

 ಸುದ್ದೀಗೋಷ್ಟಿಯಲ್ಲಿ ದರ್ಗಾ ಸಮಿತಿ ಅಧ್ಯಕ್ಷ ಎ.ಕೆ. ಮೊಹಮ್ಮದ್ ಮೋನು ಹಾಜಿ, ಪ್ರಧಾನ ಕಾರ್ಯದರ್ಶಿ ಪಳ್ಳಿ ಕುಂಞಿ ಹಾಜಿ, ಕೋಶಾಧಿಕಾರಿ ಆಲಿಕುಟ್ಟಿ, ಉದ್ಯಾವರ ಜಮಾಹತ್ ಅಧ್ಯಕ್ಷ ಸೂಫಿ ಹಾಜಿ, ಪದಾಧಿಕಾರಿಗಳಾದ ಪೂಕುಂಞಿ ತಂಘಲ್, ನಿಝಾರ್, ಮೊಯಿದೀನ್ ಕುಂಞಿ ಶಾಫಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News