×
Ad

ಈಜಿಪ್ಟ್ ಜೊತೆಗಿನ ಗಡಿ ಠಾಣೆ ತೆರೆದ ಇಸ್ರೇಲ್

Update: 2021-03-30 23:33 IST

ಟೆಲ್ ಅವೀವ್ (ಇಸ್ರೇಲ್), ಮಾ. 30: ಈಜಿಪ್ಟ್‌ನೊಂದಿಗೆ ಇರುವ ತಾಬಾ ಗಡಿ ಠಾಣೆಯನ್ನು ಇಸ್ರೇಲ್ ಮರು ತೆರೆದಿದೆ. ಕೊರೋನ ವೈರಸ್ ಸಾಂಕ್ರಾಮಿಕದ ಅವಧಿಯಲ್ಲಿ ಈ ಠಾಣೆಯನ್ನು ಮುಚ್ಚಲಾಗಿತ್ತು.

ಇದರೊಂದಿಗೆ ಸೀಮಿತ ಸಂಖ್ಯೆಯ ಜನರು ಸಿನೈಯ ಪರ್ಯಾಯ ದ್ವೀಪಕ್ಕೆ ಗಡಿ ದಾಟಿ ಹೋಗಬಹುದಾಗಿದೆ.

ಕೊರೋನ ವೈರಸ್ ಸಾಂಕ್ರಾಮಿಕದ ಬಳಿಕ ಇಸ್ರೇಲ್ ಸಾಮಾನ್ಯ ಸ್ಥಿತಿಗೆ ಬರುತ್ತಿದೆ ಎನ್ನುವುದನ್ನು ಆ ದೇಶ ಈ ಮೂಲಕ ಸೂಚಿಸುತ್ತಿದೆ ಎನ್ನಲಾಗಿದೆ. ಇಸ್ರೇಲ್‌ನ 93 ಲಕ್ಷ ಒಟ್ಟು ಜನಸಂಖ್ಯೆಯ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಮಂದಿಗೆ ಈಗಾಗಲೇ ಕೊರೋನ ವೈರಸ್ ಲಸಿಕೆ ಹಾಕಲಾಗಿದೆ. ಇದು ಜಗತ್ತಿನಲ್ಲೇ ಅತ್ಯಂತ ವೇಗದ ಲಸಿಕೆ ಕಾರ್ಯಕ್ರಮವಾಗಿದೆ.

ಮಂಗಳವಾರದಿಂದ ಎಪ್ರಿಲ್ 12ರವರೆಗೆ ಪ್ರತಿ ದಿನ 300 ಇಸ್ರೇಲಿಗರನ್ನು ತಾಬಾ ಗಡಿಯ ಮೂಲಕ ಕೆಂಪು ಸಮುದ್ರ ತೀರಕ್ಕೆ ಹೋಗಲು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News