ಸರಕಾರದ ಖಾಸಗೀಕರಣಗೊಳಿಸಿದ ಸಂಸ್ಥೆಗಳಲ್ಲಿ ಜಾತಿ ಆಧಾರಿತ ಮೀಸಲಾತಿಗೆ ಕತ್ತರಿ?

Update: 2021-03-31 16:32 GMT

ಹೊಸದಿಲ್ಲಿ,ಮಾ.31: ಸಾರ್ವಜನಿಕರಂಗದ ಉದ್ಯಮಗಳಲ್ಲಿ ಕೇಂದ್ರ ಸರಕಾರವು ತನ್ನ ಪಾಲುದಾರಿಕೆಯನ್ನು ಕಡಿಮೆಗೊಳಿಸಿದ ಆನಂತರ ಖಾಸಗಿ ಹೂಡಿಕೆದಾರ ಸಂಸ್ಥೆಗಳು ಉದ್ಯೋಗಗಳಲ್ಲಿ ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯನ್ನು ಅನುಸರಿಸದೆ ಇರ ಬಹುದಾಗಿದೆ ಎಂದು ಲೈವ್‌ಮಿಂಟ್ ಸುದ್ದಿಜಾಲತಾಣ ವರದಿ ಮಾಡಿದೆ.

ಆದಾಗ್ಯೂ ಈ ಸಂಸ್ಥೆಗಳಲ್ಲಿ ಈಗಾಗಲೇ ಉದ್ಯೋಗದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು, ವಿಕಲಾಂಗರ ಮೇಲೆ ಯಾವುದೇ ಪರಿಣಾಮವಾಗಲಾರದೆಂದು ಅದು ತಿಳಿಸಿದೆ.

ಸಂಸ್ಥೆಯ ಮೇಲಿನ ನಿಯಂತ್ರಣವು ಖಾಸಗಿವಲಯಕ್ಕೆ ವರ್ಗಾವಣೆಯಾದ ಆನಂತರ ಆಡಳಿತವರ್ಗವು ತನ್ನ ಸಿಬ್ಬಂದಿಯನ್ನು ಸಮರ್ಪಕವಾಗಿ ರಕ್ಷಿಸುತ್ತದೆಯೆಂಬುದನ್ನು ಖಾತರಿಪಡಿಸಲು ಕೇಂದ್ರ ಸರಕಾರವು ಪಾಲುದಾರರ ಒಪ್ಪಂದದಲ್ಲಿ ಹೊಸ ಶರತ್ತುಗಳು ಹಾಗೂ ನಿಯಮಗಳನ್ನು ಅಳವಡಿಸಲಿದೆ ಎಂದು ವರದಿ ತಿಳಿಸಿದೆ.

ಪಾಲುದಾರರ ಒಪ್ಪಂದವು ಸಂಸ್ಥೆಯು ತನ್ನ ಚಟುವಟಿಕೆಗಳನ್ನು ಹೇಗೆ ನಡೆಸುತ್ತದೆ, ಪ್ರತಿಯೊಬ್ಬ ಪಾಲುದಾರನಿಗೂ ಸಂಸ್ಥೆಯ ಮೇಲೆ ಇರುವ ನಿಯಂತ್ರಣ, ಸಂಸ್ಥೆಯ ವ್ಯವಹಾರಗಳ ಕುರಿತು ಆಡಳಿತ ನಿರ್ಧಾರಗಳನ್ನು ಕೈಗೊಳ್ಳುವ ವಿಧಾನಗಳು ಇತ್ಯಾದಿಗಳ ಬಗ್ಗೆ ಶರತ್ತು ಹಾಗೂ ನಿಯಮಗಳನ್ನು ರೂಪಿಸುತ್ತದೆ ಎಂದು ಲೈವ್ ಮಿಂಟ್ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News