ವಿಧಾನ ಸಭೆ ಚುನಾವಣೆ: ಪಶ್ಚಿಮಬಂಗಾಳ ಪೊಲೀಸ್ ಅಧಿಕಾರಿಗಳ ವರ್ಗಾವಣೆಗೆ ಚುನಾವಣಾ ಆಯೋಗ ಆದೇಶ

Update: 2021-03-31 17:36 GMT

ಕೋಲ್ಕತಾ, ಮಾ. 31: ತನ್ನ ವಿಶೇಷ ಪರಿವೀಕ್ಷಕರು ಒದಗಿಸಿದ ಮಾಹಿತಿಯ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಚುನಾವಣೇತರ ಕರ್ತವ್ಯಕ್ಕೆ ವರ್ಗಾಯಿಸಿ ಚುನಾವಣಾ ಆಯೋಗ (ಇಸಿ) ಆದೇಶಿಸಿದೆ.

ಪಶ್ಚಿಮಬಂಗಾಳದ ಹಾಲ್ಡಿಯಾದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಹಾಗೂ ಪರ್ಬಾ ಮೇದಿನಿಪುರ ಜಿಲ್ಲೆಯ ಮಹಿಷದಲ್‌ನ ಸರ್ಕಲ್ ಇನ್ಸ್‌ಪೆಕ್ಟರ್ ವರ್ಗಾವಣೆಗೊಂಡ ಇಬ್ಬರು ಪೊಲೀಸ್ ಅಧಿಕಾರಿಗಳು. ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಮುಖ್ಯ ಚುನಾವಣಾ ಅಧಿಕಾರಿಗೆ ಗುರುವಾರ ಬರೆದ ಪತ್ಯೇಕ ಪತ್ರದಲ್ಲಿ ಚುನಾವಣಾ ಆಯೋಗ, ಹಾಲ್ಡಿಯಾದ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಬರುಣ್ ಬೈದ್ಯ ಅವರ ಬದಲಿಗೆ ಉತ್ತಮ್ ಮಿತ್ರಾ ಅವರನ್ನು ನಿಯೋಜಿಸಬೇಕು.

ಅದೇ ರೀತಿ. ಮಹಿಷದಲದ ಸರ್ಕಲ್ ಇನ್ಸ್‌ಪೆಕ್ಟರ್ ಬದಲಿಗೆ ಜಲಪಾಗುರಿ ಸರ್ಕಿಟ್ ಬೆಂಚ್‌ನ ಇನ್ಸ್‌ಪೆಕ್ಟರ್ ಸಿರ್ಸೇಂದು ದಾಸ್ ಅವರನ್ನು ನಿಯೋಜಿಸಬೇಕು ಎಂದು ಹೇಳಲಾಗಿದೆ. ಪಶ್ಚಿಮಬಂಗಾಳ ವಿಧಾನ ಸಭೆ ಚುನಾವಣೆ 8 ಹಂತಗಳಲ್ಲಿ ನಡೆಯಲಿದೆ. ಪ್ರಥಮ ಹಂತದ ಮತದಾನ ಮಾರ್ಚ್ 27ರಂದು ನಡೆದಿತ್ತು. ಎರಡನೇ ಹಂತದ ಮತದಾನ ಎಪ್ರಿಲ್ 1ರಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News