ನ್ಯೂಝಿಲೆಂಡ್ ನಲ್ಲಿ ಪುತ್ರನಿಂದಲೇ ಮಂಗಳೂರು ಮೂಲದ ದಂಪತಿಯ ಹತ್ಯೆ?

Update: 2021-03-31 17:35 GMT

ಮಂಗಳೂರು, ಮಾ. 31: ನ್ಯೂಝಿಲೆಂಡ್ ನಲ್ಲಿ ವಾಸವಿದ್ದ ಮಂಗಳೂರು ಮೂಲದ ದಂಪತಿಯನ್ನು ಅವರ ಪುತ್ರನೇ ಕೊಲೆ ಮಾಡಿದ್ದಾನೆಲ್ಲಾದ ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಕೊಲೆಯಾದವರನ್ನು ಹರ್ಮನ್ ಬಂಗೇರ ಮತ್ತು ಎಲ್ಸಿ ಬಂಗೇರ ಎಂದು ಗುರುತಿಸಲಾಗಿದೆ. ದಂಪತಿಯ ಪುತ್ರ ಶೀಲ್ ಕೊಲೆ ಮಾಡಿದ ಆರೋಪಿ ಎಂದು ವರದಿಯಾಗಿದೆ.

ಎಲ್ಸಿ ಅವರ ಪೋಷಕರು ಸುಮಾರು 50- 60 ವರ್ಷಗಳ ಹಿಂದೆ ಮಂಗಳೂರಿನಿಂದ ಮುಂಬೈಗೆ ತೆರಳಿದ್ದು, ಅಲ್ಲಿ ಎಲ್ಸಿ ಅವರು ಬಂಗೇರ ಕುಟುಂಬದ ಯುವಕನ ಜತೆ ವಿವಾಹ ಆಗಿದ್ದರು ಎಂದು ತಿಳಿದು ಬಂದಿದೆ.

ಹರ್ಮನ್ ಮತ್ತು ಎಲ್ಸಿ ಕುಟುಂಬ ಬಳಿಕ ಮುಂಬೈನಿಂದ ನ್ಯೂಝಿಲೆಂಡ್ ಗೆ ವಲಸೆ ಹೋಗಿತ್ತು.  ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಇವರ ಪುತ್ರ ಸೀಲ್, ತನ್ನ ಹೆತ್ತವರನ್ನು ಇರಿದು ಕೊಲೆ ಮಾಡಿ ಬಳಿಕ ತಾನೂ ಇರಿದು ಕೊಳ್ಳಲು ಯತ್ನಿಸಿದ್ದ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News