×
Ad

ಬ್ಯಾರೀಸ್ ಕಾಲೇಜು ಪ್ರಾಧ್ಯಾಪಕಿ ಫಿರ್ದೋಸ್ ರಿಗೆ ಡಾಕ್ಟರೇಟ್ ಪದವಿ

Update: 2021-03-31 23:50 IST

ಕೋಡಿ: ಬ್ಯಾರೀಸ್ ಕಾಲೇಜು ಆಫ್ ಎಜುಕೇಶನ್ ಕೋಡಿ ಸಂಸ್ಥೆಯಲ್ಲಿ ಪ್ರೊಫೆಸರ್ ಇನ್ ಎಜುಕೇಶನ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ಫಿರ್ದೋಸ್ ಅವರು ಅಣ್ಣಾಮಲೈ ಯೂನಿವೆರ್ಸಿಟಿಯಿಂದ "ಎ ಸ್ಟಡಿ ಆನ್ ದಿ ಕನ್ಸ್ಟ್ರಕ್ಟಿವ್ ಬೇಸ್ಡ್ ಟೀಚಿಂಗ್ ಸ್ಟ್ರಾಟೆಜೀಸ್ ಇನ್ ರಿಲೇಶನ್ ಟು ಅಕಾಡೆಮಿಕ್ ಅಚೀವ್ಮೆಂಟ್ ಇನ್ ಇಂಗ್ಲಿಷ್" ಎಂಬ ಥೀಸಿಸ್ ಗೆ ಪಿ. ಎಚ್ ಡಿ ಪದವಿಯನ್ನು ಪಡೆದಿದ್ದಾರೆ.

ಪ್ರಾಧ್ಯಾಪಕರಾಗಿ 23 ವರ್ಷಗಳ ಅನುಭವವುಳ್ಳ ಇವರು, ಎಂ ಎಡ್ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಿಂದ, ಎಂ ಎಸ ಇನ್ ಕೋನ್ಸೆಲ್ಲಿಂಗ್ ಅಂಡ್ ಸೈಕೋಥೆರಪಿ, ಕುವೆಂಪು ವಿಶ್ವವಿದ್ಯಾಲಯದಿಂದ, ಬಿ ಎ ಇನ್ ಇಂಗ್ಲಿಷ್ ಲ್ಯಾಂಗ್ವೇಜ್ ಅಂಡ್ ಲಿಟರೇಚರ್, ಮಂಗಳೂರು ವಿಶ್ವವಿದ್ಯಾಲಯದಿಂದ, ಪೋಸ್ಟ್ ಗ್ರ್ಯಾಜುಯೆಟ್ ಡಿಪ್ಲೋಮ ಇನ್ ಇಂಗ್ಲಿಷ್ ಪ್ರಥಮ ರಾಂಕ್ ನೊಂದಿಗೆ ಮೈಸೂರು  ವಿಶ್ವವಿದ್ಯಾಲಯದಿಂದ ,ಪೋಸ್ಟ್ ಗ್ರ್ಯಾಜುಯೆಟ್ ಸರ್ಟಿಫಿಕೇಟ್ ಇನ್ ಟೀಚಿಂಗ್ ಇಂಗ್ಲಿಷ್, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್  ಫಾರಿನ್ ಲ್ಯಾಂಗ್ವೇಜ್ಸ್, ಯೂನಿವರ್ಸಿಟಿ ಹೈದರಾಬಾದ್ ದಿಂದ ಪಡೆದಿದ್ದಾರೆ.

ಉತ್ತಮ ಶಿಕ್ಷಕಿಯಾಗಿ ಕಾರ್ಯನಿರ್ವಸುತ್ತಿರುವ ಇವರಿಗೆ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸಯ್ಯದ್ ಮುಹಮದ್ ಬ್ಯಾರಿ ಅವರು, ಅಧ್ಯಕ್ಷರಾದ ಹಾಜಿ ಕೆ ಅಬ್ದುಲ್ ರೆಹಮಾನ್ ಅವರು, ನಿರ್ದೇಶಕರು, ಪ್ರಾಂಶುಪಾಲರುಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಅವರ ಈ ಸಾಧನೆಗೆ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News