ಮಾರ್ಷ್ ಬದಲಿಗೆ ರಾಯ್ ಸನ್‌ರೈಸರ್ಸ್ ತಂಡಕ್ಕೆ ಸೇರ್ಪಡೆ

Update: 2021-04-01 04:41 GMT

ಹೊಸದಿಲ್ಲಿ: ವೈಯಕ್ತಿಕ ಕಾರಣದಿಂದಾಗಿ ಆಸ್ಟ್ರೇಲಿಯದ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಎಪ್ರಿಲ್ 9ರಿಂದ ಆರಂಭವಾಗಲಿರುವ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದಿಂದ ಹೊರಗುಳಿದಿದ್ದು ಮಾರ್ಷ್ ಬದಲಿಗೆ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ತಂಡವನ್ನು ಸೇರಿಕೊಂಡಿದ್ದಾರೆ.

ಮಾರ್ಷ್ 2020ರ ಆವೃತ್ತಿಯ ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದು, ಆ ನಂತರ ಪಂದ್ಯವನ್ನು ಆಡಿರಲಿಲ್ಲ.

ವೈಯಕ್ತಿಕ ಕಾರಣದಿಂದ ಇಡೀ ಋತುವಿನಿಂದ ಅಲಭ್ಯರಾಗಿದ್ದ ಮಿಚೆಲ್ ಮಾರ್ಷ್ ಬದಲಿಗೆ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೇಸನ್ ರಾಯ್ ಸನ್‌ರೈಸರ್ಸ್ ಹೈದರಾಬಾದ್ ತಂಡದೊಂದಿಗೆ ಸಹಿ ಹಾಕಿದ್ದಾರೆ ಎಂದು ಐಪಿಎಲ್ ಪ್ರಕಟನೆಯೊಂದರಲ್ಲಿ ತಿಳಿಸಿದೆ. 2010ರಲ್ಲಿ ಐಪಿಎಲ್‌ನಲ್ಲಿ ಮೊದಲ ಪಂದ್ಯವನ್ನಾಡಿದ್ದ ಮಾರ್ಷ್ ಒಟ್ಟು 21 ಪಂದ್ಯಗಳನ್ನು ಆಡಿದ್ದು,ಮಾರ್ಷ್ ಬದಲಿಗೆ ಆಡಲಿರುವ ರಾಯ್ 2017ರಲ್ಲಿ ಗುಜರಾತ್ ಲಯನ್ಸ್ ಪರ ಚೊಚ್ಚಲ ಪಂದ್ಯವನ್ನಾಡಿದ್ದರು. 2018ರ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್(ಈಗಿನ ಡೆಲ್ಲಿ ಕ್ಯಾಪಿಟಲ್ಸ್)ಪರವಾಗಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News