ಸಸಿಹಿತ್ಲು ನಂದಿನಿ ನದಿಯಲ್ಲಿ ಈಜು ಸ್ಪರ್ಧೆ: ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್ ಗೆ ಐದು ಪ್ರಶಸ್ತಿ
ಮಂಗಳೂರು, ಎ.1: ಸಸಿಹಿತ್ಲುವಿನ ಶ್ರೀ ಆಂಜನೇಯ ದೇವಳ ಮತ್ತು ವ್ಯಾಯಾಮ ಶಾಲೆಯು ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಕಾರದಲ್ಲಿ ಇತ್ತೀಚೆಗೆ ಸಸಿಹಿತ್ಲುವಿನ ನಂದಿನಿ ನದಿಯಲ್ಲಿ ಆಯೋಜಿಸಿದ್ದ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್ ಎರಡು ಪ್ರಥಮ, ಎರಡು ದ್ವಿತೀಯ ಹಾಗೂ ಒಂದು ತೃತೀಯ ಸಹಿತ ಒಟ್ಟು ಐದು ಪ್ರಶಸ್ತಿಗಳನ್ನು ಗಳಿಸಿದೆ.
400 ಮೀ. ಈಜಿನಲ್ಲಿ ಆದಿತ್ಯ ಜಿ. ಭಂಡಾರಿ ಮತ್ತು ವಿಂಧ್ಯಾ ಜಿ. ಭಂಡಾರಿ 5 ಸಾವಿರ ರೂ. ನಗದಿನೊಂದಿಗೆ ಪ್ರಥಮ ಪ್ರಶಸ್ತಿ ಹಾಗೂ ಚಾಂಪಿಯನ್ ಟ್ರೋಫಿ ಪಡೆದಿದ್ದಾರೆ.
ಧನುಶ್ ಮತ್ತ ಶ್ರೀಶಾನ್ 400 ಮೀ. ಈಜಿನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು, 4,000 ರೂ. ನಗದು ಮತ್ತು ಟ್ರೋಫಿ ಗಳಿಸಿದ್ದಾರೆ. ಅದೇರೀತಿ, 400 ಮೀ. ಈಜಿನಲ್ಲಿ ಸ್ಫೂರ್ತಿ ತೃತೀಯ ಸ್ಥಾನ ಗಳಿಸಿದ್ದು, 1000 ರೂ. ನಗದು ಪ್ರಶಸ್ತಿ ಗಳಿಸಿದ್ದಾರೆ.
ವಿಜೇತರು ಜೈ ಹಿಂದ್ ಸ್ವಿಮ್ಮಿಂಗ್ ಕ್ಲಬ್ ನ ಮುಖ್ಯ ಕೋಚ್ ವಿ.ರಾಮಕೃಷ್ಣ ರಾವ್ ಮತ್ತು ರಾಜೇಶ್ ಆ್ಯಂಟನಿ ಬೆಂಗ್ರೆ ನೇತೃತ್ವದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.