ಕೊರಗಜ್ಜ ಕ್ಷೇತ್ರ ಮಾಲಿನ್ಯ ಪ್ರಕರಣದಲ್ಲಿ ಇಬ್ಬರಿಂದ ತಪ್ಪೊಪ್ಪಿಗೆ: ಮಂಗಳೂರು ನಗರ ಪೊಲೀಸ್ ಆಯುಕ್ತ ಹೇಳಿಕೆ
ಮಂಗಳೂರು, ಎ.1: ನಗರ ಮತ್ತು ಹೊರವಲಯದ ಹಲವು ಕಡೆ ಕೊರಗಜ್ಜ ಕ್ಷೇತ್ರದಲ್ಲಿ ಮಾಲಿನ್ಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕೊರಗಜ್ಜನ ಕ್ಷೇತ್ರಕ್ಕೆ ತೆರಳಿ ತಪ್ಪೊಪ್ಪಿಗೊಂಡ ಕುರಿತು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಆ ಹಿನ್ನಲೆಯಲ್ಲಿ ಗುರುವಾರ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಸುದ್ದಿಗಾರರ ಜೊತೆ ಮಾತನಾಡಿ, "ನಿನ್ನೆ ಎಮ್ಮೆಕೆರೆಯ ಕೊರಗಜ್ಜನ ಕ್ಷೇತ್ರಕ್ಕೆ ಆಗಮಿಸಿದ ಅಬ್ದುಲ್ ರಹೀಂ ಮತ್ತು ಅಬ್ದುಲ್ ತೌಫೀಕ್ ಎಂಬವರು 'ನಾವು ನವಾಝ್ ಎಂಬವರ ಮಾತು ಕೇಳಿ ಹಲವು ಕೊರಗಜ್ಜನ ಕ್ಷೇತ್ರವನ್ನು ಮಾಲಿನ್ಯ ಮಾಡಿದ್ದೆವು. ದುಬೈಯಲ್ಲಿದ್ದ ನವಾಝ್ ಒಂದುವರೆ ವರ್ಷದ ಹಿಂದೆ ಊರಿಗೆ ಮರಳಿದ್ದ. ಕೊರಗಜ್ಜನ ಕ್ಷೇತ್ರ ಪವರ್‌ಫುಲ್ ಅಲ್ಲ. ಅದನ್ನು ಮಲಿನ ಮಾಡಿದರೆ ಏನೂ ಆಗುವುದಿಲ್ಲ ಎಂದಿದ್ದ. ಆತನ ಮಾತು ಕೇಳಿ ಕೊರಗಜ್ಜನ ಕ್ಷೇತ್ರ ಮಾಲಿನ್ಯ ಮಾಡಿದ್ದೆವು. ಬಳಿಕ ನವಾಝ್ ಅನಾರೋಗ್ಯಕ್ಕೀಡಾಗಿ ಮೃತಪಟ್ಟಿದ್ದ. ಹಾಗಾಗಿ ನಾವು ಕ್ಷೇತ್ರಕ್ಕೆ ಆಗಮಿಸಿ ಕ್ಷಮೆ ಕೇಳುತ್ತಿದ್ದೇವೆ' ಎಂದಿದ್ದಾರೆ. ಇದೀಗ ರಹೀಂ ಮತ್ತು ತೌಫೀಕ್‌ರನ್ನು ವಿಚಾರಣೆಗೊಳಪಡಿಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೊರಗಜ್ಜನ ಕ್ಷೇತ್ರದ ಮಲಿನಗೊಳಿಸಿದ ಘಟನೆ ಅಲ್ಲಲ್ಲಿ ನಡೆದಿತ್ತು.