ಜೋಕ್ಲೆಗಾದ್ ತುಳು ನಡಕೆ ಕಾರ್ಯಕ್ರಮಕ್ಕೆ ಚಾಲನೆ
ಶಿರ್ವ, ಎ.1: ಉಡುಪಿ ತುಳುಕೂಟ ವತಿಯಿಂದ ಶಿರ್ವ ವಿದ್ಯಾವರ್ಧಕ ಸಂಘದ ಸಹಯೋಗದೊಂದಿಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ಗಳಿಗಾಗಿ ಜೋಕ್ಲೆಗಾದ್ ತುಳು ನಡಕೆ ವಿವಿಧ ಸ್ಫರ್ಧಾ ಕಾರ್ಯಕ್ರಮವನ್ನು ಇತ್ತೀಚೆಗೆ ಶಿರ್ವ ಪದವು ಹಿಂದೂ ಪ್ರೌಢಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಕುತ್ಯಾರು ಅರಮನೆಯ ಮುಖ್ಯಸ್ಥ ಜಿನೇಶ್ ಬಲ್ಲಾಳ್ ಮತ್ತು ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಜಂಟಿಯಾಗಿ ಉದ್ಘಾಟಿಸಿ ದರು. ಈ ಸಂದರ್ಭ ಅಲೆವೂರು ಲಕ್ಷ್ಮೀ ಶೇರಿಗಾರ್ತಿ ಅವರಿಗೆ ದೆಂದೂರು ದಿ.ಕೊಲ್ಲು ಕೆ.ಶೆಟ್ಟಿ ಸ್ಮರಣಾರ್ಥ ಪಾಡ್ದನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅಧ್ಯಕ್ಷತೆಯನ್ನು ಕಾರ್ಯಕ್ರಮದ ಸಂಚಾಲಕ ದಯಾನಂದ ಕೆ.ಶೆಟ್ಟಿ ದೆಂದೂರು ವಹಿಸಿದ್ದರು. ಸಮಾಜ ಸೇವಕ ಸುರೇಶ ಪಿ.ಶೆಟ್ಟಿ ಗುರ್ಮೆ ಮಾತನಾಡಿದರು. ಶಿರ್ವ ರೋಟರಿಯ ರೆಹಮತ್ತುಲ್ಲಾ ಖಾದರ್, ಹಿರಿಯ ಬರಹಗಾರ ವಸಂತ ಎನ್. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ, ಶಿರ್ವ ಸಿಎ ಬ್ಯಾಂಕ್ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿ, ಬ್ರಹ್ಮಾವರ ನ್ಯೂ ಕರ್ನಾಟಕ ಬಿಲ್ಡರ್ಸ್ ಸಂಸ್ಥೆಯ ದೀಪಾ ಚೇತನ್ ಕುಮಾರ್ ಶೆಟ್ಟಿ, ಕಾಪು ವಲಯ ಸೌಂದರ್ಯ ತಜ್ಞೆಯರ ಸಂಘದ ಅಧ್ಯಕ್ಷೆ ಜೆಸಿಂತ ಎಸ್.ಕೊರ್ಡ, ಉಡುಪಿ ರಾಮರಕ್ಷಾ ಸೇವಾ ಟ್ರಸ್ಟ್ ಅಧ್ಯಕ್ಷ ರಾಮ್ ವಿ.ಕುಂದರ್, ಕಳತ್ತೂರು ಸಮಾಜ ಸೇವಾ ವೇದಿಕೆಯ ಸಂಚಾಲಕ ದಿವಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು.
ತುಳುಕೂಟದ ಸದಸ್ಯರಾದ ಡಾ.ವಿ.ಕೆ.ಯಾದವ್, ಪ್ರಭಾಕರ್ ಭಂಡಾರಿ, ಪ್ರಕಾಶ್ ಸುವರ್ಣ, ಯಶೋಧ ಕೇಶವ್, ಅಶೋಕ್ ಶೇರಿಗಾರ್, ವಿವೇಕಾ ನಂದ ಎನ್., ದಿನೇಶ್ ಕುಲಾಲ್, ರೋಹಿತ್ ಮಲ್ಪೆ ವಿವಿಧ ಸ್ಪರ್ಧಾ ಕಾರ್ಯಕ್ರಮ ನಡೆಸಿಕೊಟ್ಟರು.
ಗುಣವತಿ ದಯಾನಂದ ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಲಕ್ಷ್ಮೀ ಪಿ.ಶೆಟ್ಟಿ ಸನ್ಮಾನಿತರನ್ನು ಪರಿಚಯಿಸಿದರು. ತುಳುಕೂಟದ ಪದಾಧಿಕಾರಿ ಯಶೋಧಾ ಕೇಶವ್ ವಂದಿಸಿದರು.