×
Ad

'ಮಧ್ವವಿಜಯ' ಇನ್ನು ತುಳು ಲಿಪಿಯಲ್ಲಿ ಓದಲು ಲಭ್ಯ

Update: 2021-04-01 20:29 IST

ಉಡುಪಿ, ಮಾ.31: ಶ್ರೀ ಮಧ್ವಾಚಾರ್ಯರ ಸಮಕಾಲೀನರಾದ ನಾರಾಯಮ ಪಂಡಿತಾಚಾರ್ಯರು ಕಾವ್ಯರೂಪದಲ್ಲಿ ರಚಿಸಿದ ಮಧ್ವಾಚಾರ್ಯರ ಚರಿತ್ರೆ ‘ಮಧ್ವವಿಜಯ’ದ ಸಾವಿರಕ್ಕೂ ಅಧಿಕ ಶ್ಲೋಕಗಳನ್ನು ಇನ್ನು ತುಳುಲಿಪಿಯಲ್ಲಿ ಓದಲು ಸಾಧ್ಯವಾಗಲಿದೆ. ಮದ್ವವಿಜಯ’ದ ತುಳು ಲಿಪಿಯಲ್ಲಿ ಓದಲು ಅನುಕೂಲವಾಗುವಂತೆ ಆಂಡ್ರಾಯ್ಡ್ ಆ್ಯಪ್‌ನ್ನು ವಿದ್ವಾನ್ ಕಡಂದಲೆ ಗಣಪತಿ ಭಟ್ ಅವರು ಸಿದ್ಧಪಡಿಸಿದ್ದಾರೆ.

ಬುಧವಾರ ಶ್ರೀಕೃಷ್ಣ ಮಠದ ರಾಜಾಂಗಣದ ನರಹರಿ ತೀರ್ಥ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಇದನ್ನು ಸಾರ್ವಜನಿಕರ ಬಳಕೆಗೆ ಬಿಡುಗಡೆಗೊಳಿಸಿದ್ದಾರೆ.

ಇದರಲ್ಲಿ ಪಠ್ಯದ ಜೊತೆಗೆ ದ್ವನಿಯೂ ಲಭ್ಯವಿದ್ದು, ತುಳುಲಿಪಿಯ ಅಭ್ಯಾಸಕ್ಕೆ ತುಂಬಾ ಅನುಕೂಲಕರವಾಗಿದೆ. ಇದು ಆಂಡ್ರಾಯ್ಡ್ ಫ್ಲೇಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ ಎಂದು ಕರ್ತೃ ಕಡಂದಲೆ ಗಣಪತಿ ಭಟ್ ಪ್ರಾಸ್ತಾವಿಕ ಮಾತುಗಳಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News