×
Ad

ದನ ಕಳ್ಳತನದ ಆರೋಪ ಹೊರಿಸಿ ಹಲ್ಲೆ ಪ್ರಕರಣ: ಪಿಎಫ್ಐ ಬೆಳ್ತಂಗಡಿ ಜಿಲ್ಲಾ ಸಮಿತಿ ಖಂಡನೆ

Update: 2021-04-01 21:16 IST

ಬೆಳ್ತಂಗಡಿ: ತಾಲೂಕಿನ ಮೇಲಂತಬೆಟ್ಟು ಎಂಬಲ್ಲಿ ನಿನ್ನೆ ರಾತ್ರಿ ಪಿಕಪ್ ನಲ್ಲಿ ಸಂಚರಿಸುತ್ತಿದ್ದ ಇಬ್ಬರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಬೆಳ್ತಂಗಡಿ ಜಿಲ್ಲಾ ಸಮಿತಿ ಖಂಡಿಸಿದೆ.

"ಗ್ಯಾರೇಜ್ ನಲ್ಲಿ ತಮ್ಮ ಪಿಕಪ್ ವಾಹನದ ರಿಪೇರಿ ನಡೆಸಿ ಸವಣಾಲು ಎಂಬಲ್ಲಿ ತಮ್ಮ ಸಂಬಂದಿಕರ ಮನೆಗೆ ಊಟಕ್ಕೆ ತೆರಳಿ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಸಂಘಪರಿವಾರದ ಸುಮಾರು 50 ಗೂಂಡಾಗಳು ಉತ್ತರ ಪ್ರದೇಶ ಮಾದರಿಯಲ್ಲಿ ಜಾನುವಾರು ಸಾಗಾಟ ಎನ್ನುವ ಸುಳ್ಳು ಆರೋಪ ಮಾಡಿ ಪಿಕಪ್ ವಾಹನಕ್ಕೆ ಅಡ್ಡಗಟ್ಟಿ ಕೊಲೆಗೆ ಯತ್ನಿಸಿ ಬೀಕರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಮತ್ತು ಅಮಾನುಷ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಬಿಜೆಪಿ ಶಾಸಕ ಹರೀಶ್ ಪೂಂಜಾ ಕ್ಷೇತ್ರದಲ್ಲಿ ಇಂತಹ ಘಟನೆಗಳು ಪದೇ ಪದೇ ಪುನರಾವರ್ತನೆ ಯಾಗುತ್ತಲೇ ಇದ್ದು, ಆರೋಪಿಗಳ ವಿರುದ್ಧ ಪೋಲಿಸರು ಕಠಿಣ ಕಾನೂನು ಕ್ರಮ ಕೈಗೊಳ್ಳದೆ ಇರುವುದರಿಂದ ಈ ರೀತಿಯ ಘಟನೆಗಳು ಪುನರಾವರ್ತನೆ ಯಾಗುತ್ತಲೇ ಇದೆ. ಘಟನೆಯಲ್ಲಿ 5 ಆರೋಪಿಗಳನ್ನು ಬಂಧಿಸಿದ್ದರೂ ಪೊಲೀಸರು 307(ಕೊಲೆ ಯತ್ನ) ಪ್ರಕರಣ ದಾಖಲಿಸದೆ 326 ಸೆಕ್ಷನ್ ಹಾಕಿ ಸುಲಭವಾಗಿ ಜಾಮೀನು ಸಿಗುವ ರೀತಿಯಲ್ಲಿ ಸೆಕ್ಷನ್ ಹಾಕಿರುವುದು ವಿಪರ್ಯಾಸವಾಗಿದೆ. ಹಾಗಾಗಿ ಪೋಲಿಸ್ ಇಲಾಖೆ ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಕಠಿಣ ಸೆಕ್ಷನ್ ಗಳನ್ನು ಹಾಕಬೇಕು. ಇಂತಹ ಕೃತ್ಯವನ್ನು ನಡೆಸಲು ಆರೋಪಿಗಳನ್ನು ಛೂ ಬಿಟ್ಟ ಸೂತ್ರಧಾರಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ಅಧ್ಯಕ್ಷ ಮುಸ್ತಫಾ ಜಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News