×
Ad

ಕುಂದಾಪುರ: ರಾಮಚಂದ್ರರಿಗೆ ಡಾಕ್ಟರೇಟ್

Update: 2021-04-01 21:47 IST

ಕುಂದಾಪುರ, ಎ.1: ಕುಂದಾಪುರ ಭಂಡಾರಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುರತ್ಕಲ್ ಕಾಟಿಪಳ್ಳದ ಮಂಗಳಪೇಟೆ ನಿವಾಸಿ ಡಾ.ರಾಮಚಂದ್ರ ಅವರು ಮಂಡಿಸಿದ ‘ಮರಾಟಿ ಸಮುದಾಯಗಳ ತೌಲನಿಕ ಅಧ್ಯಯನ’ ಎಂಬ ಸಮಾಜಶಾಸ್ತ್ರದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ಪಿಎಡ್‌ಡಿ ಪದವಿ (ಡಾಕ್ಟರೇಟ್) ನೀಡಿ ಗೌರವಿಸಿದೆ.

ಡಾ.ರಾಮಚಂದ್ರ ಇವರಿಗೆ ಹಂಪಿ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ. ಗಂಗಾಧರ ದೈವಜ್ಞ ಮಾರ್ಗದರ್ಶಕರಾಗಿ ಹಾಗೂ ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಡಾ. ಪೂರ್ವಚಾರ್ ಎಂ. ಸಹ ಮಾರ್ಗದರ್ಶಕರಾಗಿದ್ದರು. ರಾಮಚಂದ್ರ ಇವರು ಮುಲ್ಕಿ ವಿಜಯಾ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿಯಾಗಿದ್ದು, ಅಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News