×
Ad

ಜಮಾಅತೆ ಇಸ್ಲಾಮಿ ಹಿಂದ್‌ನಿಂದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ

Update: 2021-04-01 22:43 IST

ಉಡುಪಿ, ಎ.1: ತೋನ್ಸೆ ಗ್ರಾಪಂ ವ್ಯಾಪ್ತಿಯಲ್ಲಿ ಸೂರಿಲ್ಲದ ಕುಟುಂಬಗಳಿಗೆ ಮನೆ ಕಟ್ಟಿ ಕೊಡುವ ಯೋಜನೆಯಡಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್, ಹೂಡೆ ವತಿಯಿಂದ ಗುರುವಾರ 17ನೇ ಮನೆಯನ್ನು ಬಡ ಕುಟುಂಬವೊಂದಕ್ಕೆ ಹಸ್ತಾಂತರಿಸಲಾಯಿತು.

ಮನೆಯ ಕೀಲಿಗೈಯನ್ನು ಜಮಾಅತೆ ಇಸ್ಲಾಮಿ ಹಿಂದ್ ಮಲ್ಪೆಯ ಅಧ್ಯಕ್ಷ ರಫೀಕ್ ಫಲಾನುಭವಿಗೆ ಹಸ್ತಾಂತರಿಸಿದರು. ತೋನ್ಸೆ ಗ್ರಾಪಂ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಪಂಚಾಯತ್ ಕಾರ್ಯದರ್ಶಿ ದಿನಕರ್, ತಾಪಂ ಸದಸ್ಯೆ ಸುಲೋಚನ ಸತೀಶ್ ಯಶೋಧ, ಉಸ್ತಾದ್ ಸಾದೀಕ್ ಮಾತನಾಡಿ ಶುಭ ಹಾರೈಸಿದರು.

ಜಮಾಅತೆ ಇಸ್ಲಾಮಿ ಹಿಂದ್, ಹೂಡೆಯ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್ ಅಧ್ಯಕ್ಷತೆ ವಹಿಸಿದ್ದರು. ತೋನ್ಸೆ ಗ್ರಾಪಂ ಸದಸ್ಯರಾದ ಇದ್ರಿಸ್ ಹೂಡೆ, ಜಮೀಲಾ, ವಿಜಯ್, ಮಮ್ತಾಝ್, ಜೆ.ಐ.ಎಚ್ ಹೂಡೆ ಕಾರ್ಯದರ್ಶಿ ಹಸನ್ ಕೋಡಿಬೆಂಗ್ರೆ ಉಪಸ್ಥಿತರಿದ್ದರು. ಆದಿಲ್ ಹೂಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಫೀದ್ ಹೂಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News